ಕರ್ನಾಟಕ

karnataka

ETV Bharat / sports

148 ಒಲಿಂಪಿಕ್ಸ್​ ಆಥ್ಲೀಟ್ಸ್​ಗೆ ಕೋವಿಡ್ ಲಸಿಕೆ.. ಕೆಲವರಿಗೆ 2 ಡೋಸ್​ ಪೂರ್ಣ: ಐಒಸಿ ಮಾಹಿತಿ

ಲಸಿಕೆ ತೆಗೆದುಕೊಂಡಿರುವ ನಮ್ಮ 148 ಕ್ರೀಡಾಪಟುಗಳಲ್ಲಿ 17 ಮಂದಿ ತಮ್ಮ ದ್ವಿತೀಯ ಡೋಸ್ಅನ್ನು ಕೂಡ ತೆಗೆದುಕೊಂಡಿದ್ದಾರೆ. ಇನ್ನುಳಿದ 131 ಅಥ್ಲೀಟ್‌ಗಳು ತಮ್ಮ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

By

Published : May 22, 2021, 3:35 PM IST

ಕೋವಿಡ್ 19 ಲಸಿಕೆ
ಕೋವಿಡ್ 19 ಲಸಿಕೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರುವ 148 ಆಥ್ಲೀಟ್​ಗಳು ಇದುವರೆಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಶನಿವಾರ ತಿಳಿಸಿದೆ.

ಲಸಿಕೆ ತೆಗೆದುಕೊಂಡಿರುವ ನಮ್ಮ 148 ಕ್ರೀಡಾಪಟುಗಳಲ್ಲಿ 17 ಮಂದಿ ತಮ್ಮ ದ್ವಿತೀಯ ಡೋಸ್ಅನ್ನು ಕೂಡ ತೆಗೆದುಕೊಂಡಿದ್ದಾರೆ. ಇನ್ನುಳಿದ 131 ಅಥ್ಲೀಟ್‌ಗಳು ತಮ್ಮ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

ಜುಲೈ 23ರಿಂದ ಟೋಕಿಯೋದಲ್ಲಿ ಆರಂಭಗೊಳ್ಳಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪ್ರಮುಖ ಅಥ್ಲೀಟ್‌ಗಳು ಸೇರಿದಂತೆ ಒಟ್ಟು148 ಅಥ್ಲೀಟ್‌ಗಳು ಅರ್ಹತೆ ಪಡೆದಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ 13 ಅಥ್ಲೀಟ್‌ಗಳೂ ಈ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಇಬ್ಬರು ತಮ್ಮ 2 ಟೋಸ್​ಗಳನ್ನು ಪಡೆದಿದ್ದಾರೆ. ಆಗಸ್ಟ್​ 24 ರಂದು ಟೋಕಿಯೋ ಪ್ಯಾರಾಲಿಂಪಿಕ್ಸ್​ ಆರಂಭವಾಗಲಿದೆ.

ಇದನ್ನು ಓದಿ: ಕೋವಿಡ್-19​ನಿಂದ ಕನ್ನಡಿಗ ಪ್ರಸಿಧ್ ಚೇತರಿಕೆ, ನಾಳೆ ಮುಂಬೈನಲ್ಲಿರುವ ಟೀಂ ಇಂಡಿಯಾ ಸೇರ್ಪಡೆ

ABOUT THE AUTHOR

...view details