ಎಡ್ಮಂಟನ್:ವಿಶ್ವ ಜೂನಿಯರ್ ಐಸ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಫಿನ್‌ಲ್ಯಾಂಡ್ 6-0ರಿಂದ ಸ್ಲೊವಾಕಿಯಾ ತಂಡವನ್ನು ಮಣಿಸಿದೆ. ಫಿನ್‌ಲ್ಯಾಂಡ್ ಪರ ಸ್ಯಾಮ್ಯುಯೆಲ್ ಹೆಲೆನಿಯಸ್, ಕಾರ್ಲ್ ಪಿರೋಯೆನ್ ತಲಾ ಎರಡು ಗೋಲುಗಳಿಸುವ ಮೂಲಕ ತಂಡವನ್ನು ಭರ್ಜರಿ ಜಯದತ್ತ ತೆಗೆದುಕೊಂಡು ಹೋದರು.
ಗ್ರೂಪ್ ಎ ಯಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಕೆನಡಾವನ್ನು ಫಿನ್‌ಲ್ಯಾಂಡ್ ಮುಂದಿನ ಪಂದ್ಯದಲ್ಲಿ ಎದುರಿಸಲಿದೆ. ಜರ್ಮನಿ ಮತ್ತು ಸ್ಲೋವಾಕಿಯಾ ತಂಡಗಳು ಕೂಡಾ ಕ್ವಾರ್ಟರ್ ಫೈನಲ್ ತಲುಪಿದ್ದು, ಸ್ವಿಟ್ಜರ್ಲೆಂಡ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.