ಟೋಕಿಯೋ:ಇಂದು ನಡೆದ ರೋಚಕ ಪಂದ್ಯದಲ್ಲಿ ಭಾರತದ ಹಾಕಿ ವನಿತೆಯರು ಐರ್ಲೆಂಡ್ ವಿರುದ್ಧ ಕೊನೆ ಕ್ಷಣದಲ್ಲಿ ಗೋಲು ಬಾರಿಸುವ ಮೂಲಕ ರೋಚಕ ಜಯ ಸಾಧಿಸಿದ್ದಾರೆ. ಗ್ರೂಪ್ ‘ಎ’ ವಿಭಾಗದಲ್ಲಿರುವ ಭಾರತಕ್ಕೆ ಇದು ಮೊದಲ ಜಯವಾಗಿದೆ.
ಮೊದಲಾರ್ಧದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡ ಯಾವುದೇ ಗೋಲ್ಗಳನ್ನು ಪಡೆಯದೆ 0-0 ಆಟ ಮುಂದುವರೆಸಿದ್ದವು. ಕೊನೆಯ ಕ್ಷಣದಲ್ಲಿ ಭಾರತದ ಪರವಾಗಿ ನವನೀತ್ ಕೌರ್ ಗೋಲು ಬಾರಿಸಿದರು. ಈ ಮೂಲಕ ಭಾರತ ತಂಡ 1-0 ಮೂಲಕ ಮುನ್ನಡೆ ಪಡೆಯಿತು. ಅಂತಿಮವಾಗಿ ಭಾರಿ ಒತ್ತಡದಲ್ಲಿದ್ದ ಭಾರತ ತಂಡ ಐರ್ಲೆಂಡ್ ವಿರುದ್ಧ 1-0 ಮೂಲಕ ರೋಚಕ ಜಯ ಸಾಧಿಸಿತು.