ಕರ್ನಾಟಕ

karnataka

ETV Bharat / sports

ಸೋಲು-ಗೆಲುವು ಜೀವನದ ಭಾಗ, ನಮ್ಮ ಆಟಗಾರರು ನಮ್ಮ ಹೆಮ್ಮೆ: ಪ್ರಧಾನಿ ಮೋದಿ

ಬೆಲ್ಜಿಯಂ ತಂಡದ ವಿರುದ್ಧ 5-2 ಗೋಲುಗಳ ಅಂತರದಿಂದ ಭಾರತೀಯ ಹಾಕಿ ತಂಡ ಸೋಲು ಕಂಡಿದ್ದು, ಮುಂದಿನ ಪಂದ್ಯದಲ್ಲಿ ಕಂಚಿನ ಪದಕಕ್ಕೆ ಸೆಣಸಾಡಲಿದೆ.

ಪ್ರಧಾನಿ ಮೋದಿ ಟ್ವೀಟ್​
ಪ್ರಧಾನಿ ಮೋದಿ ಟ್ವೀಟ್​

By

Published : Aug 3, 2021, 9:41 AM IST

ಟೋಕಿಯೋ:ಟೋಕಿಯೋ ಒಲಿಂಪಿಕ್ಸ್‌ ಹಾಕಿ ಸೆಮಿ ಫೈನಲ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಬೆಲ್ಜಿಯಂ ವಿರುದ್ಧ 5-2 ಗೋಲುಗಳಿಂದ ಸೋಲು ಅನುಭವಿಸಿತು. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ತಂಡಕ್ಕೆ ಧೈರ್ಯ ತುಂಬಿ ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.

'ಸೋಲು-ಗೆಲುವು ಜೀವನದ ಭಾಗ. ನಮ್ಮ ಭಾರತದ ಪುರುಷರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ಪಂದ್ಯಕ್ಕೆ ಮತ್ತು ಭವಿಷ್ಯದ ಅಭಿಯಾನಕ್ಕೆ ತಂಡಕ್ಕೆ ಶುಭಾಶಯಗಳು, ನಮ್ಮ ಆಟಗಾರರ ಬಗ್ಗೆ ಹೆಮ್ಮೆಯಿದೆ' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಪಂದ್ಯ ಹೀಗಿತ್ತು..

ಸೆಮಿಪೈನಲ್‌ ಹಣಾಹಣಿ ಆರಂಭವಾದ ಎರಡನೇ ನಿಮಿಷಕ್ಕೆ ವಿಶ್ವಚಾಂಪಿಯನ್​ ಬೆಲ್ಜಿಯಂ ಮೊದಲ ಗೋಲು ಗಳಿಸಿ ಖಾತೆ ತೆರೆಯಿತು. ಇದಾದ ಬಳಿಕ 10ನೇ ನಿಮಿಷದಲ್ಲಿ ಭಾರತದ ಹರ್ಮನ್​ಪ್ರೀತ್​ ಸಿಂಗ್​ ಅದ್ಭುತ ಗೋಲು ಗಳಿಸಿ ಗೋಲುಗಳನ್ನು 1-1ರಲ್ಲಿ ಸಮಬಲ ಮಾಡಿದರು. ಈ ಗೋಲು ದಾಖಲಾದ 8 ನಿಮಿಷಗಳ ನಂತರ ನಾಯಕ ಮನ್‌ಪ್ರೀತ್‌ ಮತ್ತೊಂದು ಗೋಲು ಗಳಿಸಿದ್ದು, 2-1ರಿಂದ ಭಾರತ ಮುನ್ನಡೆ ಪಡೆಯಿತು. ಇದಕ್ಕೆ ಬೆಲ್ಜಿಯಂ ಕೂಡಾ ದಿಟ್ಟ ಉತ್ತರ ನೀಡಿತು. ಪಂದ್ಯದ 30ನೇ ನಿಮಿಷದಲ್ಲಿ ಹ್ಯಾನಿಡ್ರಿಕ್​ ಹಿಲ್ಸ್​​ ಗೋಲು ಗಳಿಸಿದಾಗ ಉಭಯ ತಂಡಗಳು 2-2ರಿಂದ ಸಮಬಲ ಸಾಧಿಸಿದವು.

ಇದನ್ನೂ ಓದಿ: Tokyo Olympics: ಪುರುಷರ ಹಾಕಿಯಲ್ಲಿ ಭಾರತದ ಚಿನ್ನದ ಕನಸು ಭಗ್ನ

ಮೊದಲ ಸುತ್ತಿನಲ್ಲಿ 2-2ರಿಂದ ಸಮಬಲ ಸಾಧಿಸಿದ್ದ ಇತ್ತಂಡಗಳು ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಯಾವುದೇ ಗೋಲು ಗಳಿಸಲಿಲ್ಲ. ಆದರೆ ಅಂತಿಮ ಹಂತದಲ್ಲಿ ರೋಚಕ ಆಟವಾಡಿದ ಬೆಲ್ಜಿಯಂ ಆಟಗಾರರು ಕೇವಲ 7 ನಿಮಿಷಗಳ ಅಂತರದಲ್ಲಿ ಹ್ಯಾಟ್ರಿಕ್​​ ಗೋಲುಗಳಿಸಿ ಜಯ ಸಾಧಿಸಿದರು.

ABOUT THE AUTHOR

...view details