ಕರ್ನಾಟಕ

karnataka

ETV Bharat / sports

ಹಾಕಿ ಇಂಡಿಯಾದ ಇಬ್ಬರಿಗೆ ಕೊರೊನಾ​: ಎಲ್ಲಾ ಸಿಬ್ಬಂದಿಗೆ ಕ್ವಾರಂಟೈನ್​ನಲ್ಲಿರಲು ಸೂಚನೆ - ಕೋವಿಡ್ 19

ಹಾಕಿ ಇಂಡಿಯಾ ಕಚೇರಿಯಲ್ಲಿ ಕಾರ್ಯನಿರ್ವಹಿಸುವ 31 ಮಂದಿಯಲ್ಲಿ 29 ಮಂದಿಯನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು 2 ವಾರಗಳ ಕಾಲ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಾಕಿ ಇಂಡಿಯಾ
ಹಾಕಿ ಇಂಡಿಯಾ

By

Published : May 31, 2020, 12:59 PM IST

ನವದೆಹಲಿ: ಹಾಕಿ ಇಂಡಿಯಾ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಕಚೇರಿಯನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕಚೇರಿಯ ಮತ್ತಿಬ್ಬರು ಸಿಬ್ಬಂದಿ ವರದಿ ಬಗ್ಗೆ ಗೊಂದಲವಿರುವುದರಿಂದ ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್​ ಹಾಗೂ ಇಂಡಿಯನ್​ ಒಲಿಂಪಿಕ್ಸ್​ ಅಸೋಸಿಯೇಷನ್​ ಅಧ್ಯಕ್ಷ ನರೇಂದ್ರ ಬಾತ್ರಾ ಹೇಳಿಕೆ ನೀಡಿದ್ದಾರೆ.

ಅಕೌಂಟ್​ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಹಾಗೂ ಜೂನಿಯರ್​ ಫೀಲ್ಡ್​ ಅಧಿಕಾರಿಗೆ ಕೊರೊನಾ ಪಾಸಿಟಿವ್​ ವರದಿ ಬಂದಿದೆ ಎಂದು ಬಾತ್ರಾ ಮಾಹಿತಿ ನೀಡಿದ್ದಾರೆ. ಇನ್ನು ಪುನರ್​ ಪರೀಕ್ಷೆಗೆ ಒಳಗಾಗುತ್ತಿರುವವರಲ್ಲಿ ಒಬ್ಬರು ಜಂಟಿ ನಿರ್ದೇಶಕ, ಮತ್ತೊಬ್ಬ ಡಿಸ್ಪಾಚ್​ ಕ್ಲರ್ಕ್​ ಎಂದು ಅವರು ತಿಳಿಸಿದ್ದಾರೆ.

ನೆಗೆಟಿವ್ ವರದಿ ಬಂದಿರುವ 25 ಜನರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ.

ABOUT THE AUTHOR

...view details