ನವದೆಹಲಿ: ಮುಂದಿನ ತಿಂಗಳು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ಅವರನ್ನು ನಾಯಕಿಯಾಗಿ ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ
ಜುಲೈ 23ರಿಂದ ಆಗಸ್ಟ್ 8ರವರೆಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಕಳೆದ ಭಾನುವಾರ ಹಾಕಿ ಇಂಡಿಯಾ 16 ಸದಸ್ಯರ ಮಹಿಳಾ ತಂಡವನ್ನು ಘೋಷಿಸಿತ್ತು. ಆದರೆ, ನಾಯಕಿಯ ಹೆಸರನ್ನು ನಂತರ ಘೋಷಿಸುವುದಾಗಿ ತಿಳಿಸಿದ್ದರು. ಇಂದು ರಾಣಿ ರಾಂಪಾಲ್ ಅವರನ್ನು ನಾಯಕಿಯನ್ನಾಗಿ, ದೀಪ್ ಗ್ರೇಸ್ ಎಕ್ಕಾ ಮತ್ತು ಗೋಲ್ ಕೀಪರ್ ಸವಿತಾ ಪೂನಿಯಾ ಅವರನ್ನು ಉಪ ನಾಯಕಿಯರನ್ನಾಗಿ ಆಯ್ಕೆ ಮಾಡಿದೆ.
" ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ. ತಂಡದ ಸಹ ಆಟಗಾರ್ತಿಯರು ಹಿರಿಯ ಆಟಗಾರರಂತೆ ಜವಾಬ್ದಾರಿಯನ್ನು ಹಂಚಿಕೊಂಡಿದ್ದರಿಂದ ಕಳೆದ ಕೆಲವು ವರ್ಷಗಳಲ್ಲಿ ನಾಯಕಿಯಾಗಿ ನನ್ನ ಪಾತ್ರವನ್ನು ಸುಲಭಗೊಳಿಸಿತ್ತು" ಎಂದು 26 ವರ್ಷದ ರಾಣಿ ಹೇಳಿದ್ದಾರೆ.