ಭುವನೇಶ್ವರ: ಭಾರತೀಯ ಮಹಿಳಾ ಹಾಕಿ ತಂಡ ಅಮೆರಿಕದ ವಿರುದ್ಧ ನಡೆದ ನಡೆದ ಎರಡನೇ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ 1-4 ಗೋಲುಗಳ ಅಂತರದಿಂದ ಸೋಲು ಅನುಭವಿಸಿದರೂ 2020ರ ಟೋಕಿಯೊ ಒಲಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದೆ.
ಮೊದಲ ಪಂದ್ಯದಲ್ಲಿ 5-1 ಅಂತರದಿಂದ ಜಯ ಸಾಧಿಸಿದ್ದ ಭಾರತ, ಎರಡೂ ಪಂದ್ಯಗಳ ಒಟ್ಟು ಗೋಲುಗಳನ್ನ ಲೆಕ್ಕ ಹಾಕಿದಾಗ 6-5 ಗೋಲುಗಳ ಸರಾಸರಿ ಅಂತರದಿಂದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ. ಭಾತರ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಗಳಿಸಿದ ಒಂದು ಗೋಲು ಒಲಂಪಿಕ್ಸ್ಗೆ ಅರ್ಹತೆ ಪಡೆಯುವಂತೆ ಮಾಡಿದೆ.