ಭುವನೇಶ್ವರ್: ನವೆಂಬರ್ 24ರಿಂದ ಡಿಸೆಂಬರ್ 5ರವರೆಗೆ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ FIH ಜೂನಿಯರ್ ವಿಶ್ವಕಪ್ ನಡೆಯಲಿದ್ದು, ಗುರುವಾರ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟ್ರೋಫಿ ಅನಾವರಣಗೊಳಿಸಿದರು.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನೆರಡು ತಿಂಗಳಲ್ಲಿ ನಡೆಯುವ ಪುರುಷರ ಜೂನಿಯರ್ ವಿಶ್ವಕಪ್ ಆಯೋಜನೆಗೆ ಬೆಂಬಲ ನೀಡುವಂತೆ ಹಾಕಿ ಇಂಡಿಯಾ ಒಡಿಶಾ ಸರ್ಕಾರವನ್ನು ಕೇಳಿಕೊಂಡಿತ್ತು ಎಂದು ತಿಳಿಸಿದರು.
'ದೇಶದ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ನಾವು ವಿಶ್ವಕಪ್ ಆಯೋಜನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದೇವೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣವು ಎಫ್‌ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ಗೆ ಆತಿಥ್ಯವಹಿಸಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ' ಎಂದು ಪಟ್ನಾಯಕ್ ಹೇಳಿದ್ದಾರೆ.