ನವದೆಹಲಿ: ಭಾರತದ ಮಾಜಿ ಹಾಕಿ ಆಟಗಾರ ಮತ್ತು ತರಬೇತುದಾರ ಎಂ.ಕೆ ಕೌಶಿಕ್ (66) ಅವರು ಕೋವಿಡ್ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ.
ಕೌಶಿಕ್ ಅವರು ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಿಗೆ ತರಬೇತುದಾರರಾಗಿದ್ದರು. ಅವರ ತರಬೇತಿಯಡಿಯಲ್ಲಿ, 1998ರ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ತಂಡ ಚಿನ್ನದ ಪದಕ ಗೆದ್ದಿತ್ತು. ಅಲ್ಲದೆ, ಭಾರತೀಯ ಮಹಿಳಾ ತಂಡವು 2006 ರಲ್ಲಿ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಸಾಧನೆ ಮಾಡಿದೆ.