ಕರ್ನಾಟಕ

karnataka

ETV Bharat / sports

2021ರ ಸವಿನೆನಪು : ಹಾಕಿಗೆ ಮರುಜೀವ ತುಂಬಿದ ಟೋಕಿಯೋ ಒಲಿಂಪಿಕ್ಸ್ ಮೆಡಲ್ - ಟೋಕಿಯೊ ಒಲಿಂಪಿಕ್ಸ್​ನಲ್ಲಿ ಹಾಕಿ ತಂಡಕ್ಕೆ ಕಂಚಿನ ಪದಕ

ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆಯಲ್ಲದಿದ್ದರೂ 50ರಿಂದ 80ರ ದಶಕದವರೆಗೆ ಅಂತಾರಾಷ್ಟ್ರೀಯ ಟೂರ್ನಮೆಂಟ್​ನಲ್ಲಿ ನೀಡಿದ ಪ್ರದರ್ಶನ ದೇಶದ ಪ್ರಮುಖ ಕ್ರೀಡೆ ಎನ್ನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿತ್ತು. ಆದರೆ,1980ರ ನಂತರ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕವನ್ನೂ ಪಡೆಯದ ಹಂತಕ್ಕೆ ಬಂದು ತಲುಪಿತ್ತು..

hockey 2021
2021ರ ಹಾಕಿ ಸವಿನನೆಪು

By

Published : Dec 26, 2021, 7:48 PM IST

ನವದೆಹಲಿ :ಒಂದು ಕಾಲದಲ್ಲಿ ಹಾಕಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡ ಕಳೆದ 4 ದಶಕಗಳ ಕಾಲ ಭಾರಿ ವೈಫಲ್ಯ ಕಂಡು ಕಡೆಗಣನೆಗೆ ಒಳಗಾಗಿತ್ತು. ಆದರೆ, 2020ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆಲ್ಲುವ ಮೂಲಕ ಮತ್ತೆ ದೇಶದಲ್ಲಿ ಮರುಜೀವ ಪಡೆದಿದೆ. ಮಹಿಳಾ ಹಾಕಿ ತಂಡ ಕೂಡ 4ನೇ ಸ್ಥಾನ ಪಡೆದು ದೇಶದ ಮನೆ ಮಾತಾಗಿದೆ.

ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆಯಲ್ಲದಿದ್ದರೂ 50ರಿಂದ 80ರ ದಶಕದವರೆಗೆ ಅಂತಾರಾಷ್ಟ್ರೀಯ ಟೂರ್ನಮೆಂಟ್​ನಲ್ಲಿ ನೀಡಿದ ಪ್ರದರ್ಶನ ದೇಶದ ಪ್ರಮುಖ ಕ್ರೀಡೆ ಎನ್ನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿತ್ತು. ಆದರೆ, 1980ರ ನಂತರ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕವನ್ನೂ ಪಡೆಯದ ಹಂತಕ್ಕೆ ಬಂದು ತಲುಪಿತ್ತು.

ಕೊರೊನಾ ಮಣಿಸಿದ್ದ ಮನ್​ಪ್ರೀತ್ ಬಳಗ

ಟೋಕಿಯೋ ಒಲಿಂಪಿಕ್ಸ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ತಂಡದ ಅರ್ಧಕ್ಕೂ ಹೆಚ್ಚು ಆಟಗಾರರಿಗೆ ಕೊರೊನಾ ಕಾಣಿಸಿತು. ಆದರೂ ಮನೆ, ಮಡದಿ, ಮಕ್ಕಳನ್ನು ದೂರವಾಗಿಸಿಕೊಂಡು ಬೆಂಗಳೂರಿನ SAIನಲ್ಲಿ ಕಠಿಣ ಪರಿಶ್ರಮ ಪಟ್ಟು ಅಭ್ಯಾಸ ಮಾಡಿ ಕೊನೆಗೂ ಟೋಕಿಯೋದಲ್ಲಿ ಇತಿಹಾಸ ನಿರ್ಮಿಸಿ ಮರೆಯಾಗುತ್ತಿದ್ದ ಭಾರತೀಯ ಕ್ರೀಡೆಗೆ ಜೀವ ತುಂಬಿದರು.

ಇದನ್ನೂ ಓದಿ:ಗಬ್ಬಾ ದಿಗ್ವಿಜಯ, ಒಲಿಂಪಿಕ್ಸ್ ಚಿನ್ನ, ವಿಶ್ವಚಾಂಪಿಯನ್​ಶಿಪ್​ ಬೆಳ್ಳಿ ಪದಕ ಸೇರಿದಂತೆ ಭಾರತ ಕ್ರೀಡೆಯ 2021ರ ಅವಿಸ್ಮರಣೀಯ ಕ್ಷಣಗಳು

40 ವರ್ಷಗಳ ನಂತರ ಪದಕ

ಹಲವು ಸವಾಲುಗಳನ್ನೆದುರಿಸಿ ಟೋಕಿಯೋ ಪ್ರವೇಶಿಸಿದ್ದ ಮನ್​ಪ್ರೀತ್ ಸಿಂಗ್ ಬಳಗ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3-2ರಲ್ಲಿ ಗೆದ್ದರೆ, 2ನೇ ಪಂದ್ಯದಲ್ಲಿ 1-7ರಲ್ಲಿ ಆಸೀಸ್​ ವಿರುದ್ಧ ಸೋಲುಂಡಿತು. ಆದರೂ ಧೃತಿಗೆಡದೇ ಜಪಾನ್​ ಮತ್ತು ಸ್ಪೇನ್​ ವಿರುದ್ಧ ಗೆದ್ದು ಕ್ವಾರ್ಟರ್​ ಫೈನಲ್ ಪ್ರವೇಶಿಸಿತು. ನಂತರ 3-1ರಲ್ಲಿ ಗ್ರೇಟ್​ ಬ್ರಿಟನ್ ಎದುರು ಗೆದ್ದು ಸೆಮಿಫೈನಲ್ ಪ್ರವೇಶಿಸಿತು.

ಆದರೆ, ನಾಲ್ಕರ ಘಟ್ಟದಲ್ಲಿ ಬೆಲ್ಜಿಯಂ ವಿರುದ್ಧ 2-5ರಲ್ಲಿ ಸೋಲು ಕಂಡಿತು. ಕೊನೆಗೆ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 5-4 ಗೋಲುಗಳಿಂದ ಜರ್ಮನಿ ವಿರುದ್ಧ ಗೆದ್ದು ಇತಿಹಾಸ ಮರುಕಳಿಸುವಂತೆ ಮಾಡಿತು. ಈ ಟೂರ್ನಿಯ ನಂತರ ಸುದೀರ್ಘ ವಿಶ್ರಾಂತಿಯಲ್ಲಿ ಭಾರತೀಯ ತಂಡ ಕಳೆದ ವಾರ ನಡೆದ ಏಷ್ಯನ್ ಚಾಂಪಿಯನ್​ ಟ್ರೋಫಿಯಲ್ಲೂ ಕಂಚಿನ ಪದಕ ಗೆದ್ದು ವರ್ಷವನ್ನು ಅವಿಸ್ಮರಣೀಯವನ್ನಾಗಿಸಿಕೊಂಡಿತು.

40 ವರ್ಷಗಳ ನಂತರ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಮಹಿಳಾ ತಂಡ

ಮಹಿಳಾ ಹಾಕಿಯಲ್ಲಿ ಈ ವರ್ಷ ಸ್ಮರಣೀಯವಾಗಿತ್ತು. 1980ರ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತೀಯ ಮಹಿಳಾ ಮಣಿಗಳು ನಂತರ 40 ವರ್ಷಗಳ ಕಾಲ ಒಲಿಂಪಿಕ್ಸ್ ಇತಿಹಾಸದಲ್ಲಿ ವೈಫಲ್ಯ ಅನುಭವಿಸಿದ್ದರು. 2016ರ ರಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲೂ ವಿಫಲವಾಗಿದ್ದ ರಾಣಿ ರಾಂಫಾಲ್​ ಬಳಗ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕ್ವಾರ್ಟರ್ ಫೈನಲ್​ನಲ್ಲಿ ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿ ಭಾರತೀಯರ ಮನಗೆದ್ದಿತ್ತು. ಆದರೆ, ಪದಕ ಗೆಲ್ಲುವಲ್ಲಿ ವಿಫಲವಾಗಿತ್ತು.

ಆದರೂ ಕಳೆದ ಒಲಿಂಪಿಕ್ಸ್​ನಲ್ಲಿ ಅರ್ಹತೆ ಪಡೆಯದ ತಂಡ ತನ್ನ ಅವಿಶ್ರಾಂತ ಹೋರಾಟದಿಂದ ಸೆಮಿಫೈನಲ್​ವರೆಗೆ ಬಂದಿದ್ದರಿಂದ ಕೋಟ್ಯಂತರ ಭಾರತೀಯರಿಂದ ಪ್ರಶಂಸೆಗೆ ಪಾತ್ರರಾದರು. ಪದಕಗಳ ಜೊತೆಗೆ ಹಾಕಿ ಶ್ರೇಯಾಂಕದಲ್ಲಿ ಪುರುಷರ ತಂಡ 3ನೇ ಶ್ರೇಯಾಂಕ ಪಡೆದರೆ, ಮಹಿಳಾ ತಂಡ 9ನೇ ಶ್ರೇಯಾಂಕದಲ್ಲಿ 2021 ಅನ್ನು ಅಂತ್ಯಗೊಳಿಸಿದೆ.

ಇದನ್ನೂ ಓದಿ:ಸಿಂಧುಗೆ ಒಲಿಂಪಿಕ್ಸ್ ಪದಕ, ಶ್ರೀಕಾಂತ್ ಕಮ್​ಬ್ಯಾಕ್​ ಮತ್ತು 'ಲಕ್ಷ್ಯ' ಸೇನ್ ಸೈನ್​: 2021 ಬ್ಯಾಡ್ಮಿಂಟನ್​ಗೆ ಸಮಾಧಾನಕರ ವರ್ಷ​

ABOUT THE AUTHOR

...view details