ಟೋಕಿಯೋ: ಮಂದೀಪ್ ಸಿಂಗ್ ಸಿಡಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡ ಜಪಾನ್ ತಂಡವನ್ನು 6-3ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದೆ.
ಮಂಗಳವಾರ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ಟೆಸ್ಟ್ ಹಾಕಿ ಟೂರ್ನಿಯಲ್ಲಿ ಭಾರತ ಆತಿಥೇಯ ಜಪಾನ್ ತಂಡವನ್ನು ಬಗ್ಗುಬಡಿದಿದೆ. ಪಂದ್ಯದ 3ನೇ ನಿಮಿಷದಲ್ಲಿ ನೀಲಕಾಂತ್ ಶರ್ಮಾ ಗೋಲುಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನೀಲಂ ಸಂಜೀಪ್ ಗೋಲಾಗಿ ಪರಿವರ್ತಿಸಿ 2-0 ಮುನ್ನಡೆ ಹೆಚ್ಚಿಸಿದರು.
ಇನ್ನು ಆಕ್ರಮಣ ಆಟಕ್ಕೆ ಮುಂದಾದ ಮಂದೀಪ್ 9ನೇ ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಈ ವೇಳೆ 25 ನೇ ನಿಮಿಷದಲ್ಲಿ ಜಪಾನ್ ಕೆಟರೊ ಫೆಕುದಾ ಗೋಲುಗಳಿಸಿ ಹಿನ್ನಡೆಯನ್ನು1-3ಕ್ಕೆ ತಗ್ಗಿಸಿಕೊಂಡರು. ಆದರೆ, 29ನೇ ನಿಮಿಷದಲ್ಲಿ ಮಂದೀಪ್ ಗೋಲುಗಳಿಸಿದರೆ, 36 ನಿಮಿಷದಲ್ಲಿ ಕೆಂತ ತನಕ ಗೋಲುಗಳಿಸಿದರು.
40ನೇ ನಿಮಿಷದಲ್ಲಿ ಮಂದೀಪ್, 41 ನಿಮಿಷದಲ್ಲಿ ಗುರ್ಜಂತ್ ಸಿಂಗ್ ಗೋಲುಗಳಿಸಿ 5-2ಕ್ಕೆ ಮುನ್ನಡೆ ತಂದುಕೊಟ್ಟರು, 52ನೇ ನಿಮಿದಲ್ಲಿ ಜಪಾನ್ನ ಕಜ್ಮು ಮುರಟ ಗೋಲುಗಳಿಸಿ ಸೋಲಿನ ಅಂತರವನ್ನು 3-6ಕ್ಕೆ ತಗ್ಗಿಸಿಕೊಂಡರು. ಭಾರತ ತಂಡ ನಾಳೆ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.