ಭುವನೇಶ್ವರ: ಜೂನಿಯರ್ ವಿಶ್ವಕಪ್ನಲ್ಲಿ ಭಾರತ ಗೆಲುವಿನ ಹಳಿಗೆ ಮರಳಿದ್ದು, ಕೆನಡಾ ವಿರುದ್ಧ 13-1 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ಕಳಿಂಗ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರಾಬಲ್ಯಯುತ ಪ್ರದರ್ಶನ ತೋರಿದ ಭಾರತೀಯ ಪಡೆ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿತು. ಫ್ರಾನ್ಸ್ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ್ದ ಸಂಜಯ್ ಇಂದಿನ ಪಂದ್ಯದಲ್ಲೂ ಹ್ಯಾಟ್ರಿಕ್ ಗೋಲು ಬಾರಿಸಿದರು. ಶಾರದ ನಂದ ತಿವಾರಿ 2, ಅರಿಜೀತ್ ಸಿಂಗ್ 2, ಉತ್ತಮ್ ಸಿಂಗ್ 2, ಮಣೀಂದರ್ ಸಿಂಗ್, ಅಭಿಷೇಕ್ ಲಕ್ರಾ, ಮತ್ತು ವಿಕಾಶ್ ಸಾಗರ್ ಪ್ರಸಾದ್ ತಲಾ ಒಂದು ಗೋಲು ಸಿಡಿಸಿ ಬೃಹತ್ ಜಯಕ್ಕೆ ಕಾರಣರಾದರು.