ಭುವನೇಶ್ವರ:ಬೆಲ್ಜಿಯಂ ವಿರುದ್ಧ 1-0ಯಲ್ಲಿ ಗೆಲ್ಲುವ ಮೂಲಕ ಭಾರತ ಕಿರಿಯರ ಹಾಕಿ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ಸ್ನ ರೋಚಕ ಕಾದಾಟದಲ್ಲಿ ಶಾರ್ದಾ ನಂದ ತಿವಾರಿ 21ನೇ ನಿಮಿಷದಲ್ಲಿ ಸಿಡಿಸಿದ ಪೆನಾಲ್ಟಿ ಗೋಲಿನ ನೆರವಿನಿಂದ ಭಾರತ 1-0 ಗೋಲಿನಿಂದ ಬೆಲ್ಜಿಯಂ ಮಣಿಸಿ ಉಪಾಂತ್ಯಕ್ಕೆ ತೇರ್ಗಡೆಯಾಯಿತು. ಜೊತೆಗೆ ಬೆಲ್ಜಿಯಂ ವಿರುದ್ಧ 5-0ಯಲ್ಲಿ ಗೆಲುವಿನ ಅಂತರವನ್ನು ವಿಸ್ತರಿಸಿಕೊಂಡಿತು.
ಭಾರತ ತಂಡ ಸೆಮಿಫೈನಲ್ಸ್ನಲ್ಲಿ 6 ಬಾರಿಯ ಚಾಂಪಿಯನ್ ಜರ್ಮನಿಯನ್ನು ಎದುರಿಸಲಿದೆ. ಇದಕ್ಕೂ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಜರ್ಮನಿ ಮತ್ತು ಸ್ಪೇನ್ ನಡುವಿನ ಪಂದ್ಯ 2-2ರಲ್ಲಿ ಡ್ರಾನಲ್ಲಿ ಅಂತ್ಯಗೊಂಡಿತು. ಆದರೆ, ಪೆನಾಲ್ಟಿ ಶೂಟೌಟ್ನಲ್ಲಿ ಜರ್ಮನಿ 3-1ರಲ್ಲಿ ಜಯ ಸಾಧಿಸಿತು. ಜರ್ಮನಿ 2016ರಲ್ಲಿ ಲಖನೌದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಕಂಚಿನ ಪದಕ ಪಡೆದಿತ್ತು.