ಕರ್ನಾಟಕ

karnataka

ETV Bharat / sports

ಅರ್ಜೆಂಟೀನಾ - ಭಾರತ ಹಾಕಿ ಪಂದ್ಯ ಡ್ರಾ ನಲ್ಲಿ ಅಂತ್ಯ - ಭಾರತೀಯ ಕಿರಿಯ ಮಹಿಳಾ ಹಾಕಿ ತಂಡ

ಎಂಟನೇ ಮತ್ತು ಒಂಬತ್ತನೇ ನಿಮಿಷಗಳಲ್ಲಿ ಭಾರತೀಯ ತಂಡವು ಪೆನಾಲ್ಟಿ ಕಾರ್ನರ್​​​​​​ನಲ್ಲಿ ಎರಡು ಬ್ಯಾಕ್ - ಟು - ಬ್ಯಾಕ್ ಗೋಲುಗಳಿಸಲು ಅವಕಾಶವಿದ್ದರು, ಅರ್ಜೆಂಟೀನಾ ತಂಡದ ಒಳ್ಳೆಯ ಡಿಫೆನ್ಸ್​ನಿಂದ ಗೋಲುಗಳಿಸಲು ಸಾಧ್ಯವಾಗಲಿಲ್ಲ. ಆದರೆ, 22 ನೇ ನಿಮಿಷದಲ್ಲಿ ಶರ್ಮಿಳಾ ಗೋಲುಗಳಿಸುವ ಮೂಲಕ 1-0 ಮುನ್ನಡೆ ತಂದು ಕೊಟ್ಟರು.

Indian women's hockey team, Argentina juniors draw 2-2
ಅರ್ಜೆಂಟೀನಾ - ಭಾರತ ಹಾಕಿ ಪಂದ್ಯ ಡ್ರಾ ನಲ್ಲಿ ಅಂತ್ಯ

By

Published : Jan 19, 2021, 8:31 AM IST

ಅರೇಬ್ಯೂನಸ್ ಐರಿಸ್ : ಒಂದು ವರ್ಷದ ನಂತರ ಅಂತಾರಾಷ್ಟ್ರೀಯ ಸ್ಪರ್ಧೆಗೆ ಮರಳಿದ ಭಾರತೀಯ ಕಿರಿಯ ಮಹಿಳಾ ಹಾಕಿ ತಂಡವು, ಅರ್ಜೆಂಟೀನಾದ ಕಿರಿಯ ಮಹಿಳಾ ರಾಷ್ಟ್ರೀಯ ತಂಡದ ವಿರುದ್ಧ 2-2ರ ಸಮಬಲದಿಂದ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿತು.

ಯುವ ಸ್ಟ್ರೈಕರ್ ಶರ್ಮಿಳಾ ದೇವಿ (22 ನೇ ನಿಮಿಷ) ಮತ್ತು ಅನುಭವಿ ಡೀಪ್ ಗ್ರೇಸ್ ಎಕ್ಕಾ (31 ನೇ ನಿಮಿಷ) ಅವರ ಗೋಲುಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾದರು. ಎಂಟನೇ ಮತ್ತು ಒಂಬತ್ತನೇ ನಿಮಿಷಗಳಲ್ಲಿ ಭಾರತೀಯ ತಂಡವು ಪೆನಾಲ್ಟಿ ಕಾರ್ನರ್​​​ನಲ್ಲಿ ಎರಡು ಬ್ಯಾಕ್ - ಟು - ಬ್ಯಾಕ್ ಗೋಲುಗಳಿಸಲು ಅವಕಾಶವಿದ್ದರೂ ಅರ್ಜೆಂಟೀನಾ ತಂಡದ ಒಳ್ಳೆಯ ಡಿಫೇನ್ಸ್​ನಿಂದ ಗೋಲುಗಳಿಸಲು ಸಾಧ್ಯವಾಗಲಿಲ್ಲ. ಆದರೆ 22 ನೇ ನಿಮಿಷದಲ್ಲಿ ಶರ್ಮಿಳಾ ಗೋಲುಗಳಿಸುವ ಮೂಲಕ 1-0 ಮುನ್ನಡೆ ತಂದುಕೊಟ್ಟರು.

ಓದಿ :ಕುತೂಹಲ ಮೂಡಿಸಿದ ಕೊನೆಯ ದಿನದಾಟ: ಗಿಲ್ ಗುದ್ದಿಗೆ ಕಾಂಗರೂ ಪಡೆ ಹೈರಾಣು

ಆದರೆ, ಅರ್ಜೆಂಟೀನಾದ ಪೌಲಾ ಸಾಂತಮರೀನಾ 28 ನೇ ನಿಮಿಷದಲ್ಲಿ ಗೋಲು ಬಾರಿಸಿ ಡ್ರಾ ಸಾಧಿಸಿದರು. 31 ನೇ ನಿಮಿಷದಲ್ಲಿ ಡೀಪ್ ಗ್ರೇಸ್ ಎಕ್ಕಾ ಪೆನಾಲ್ಟಿ ಕಾರ್ನರ್ ಗೋಲುಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, 48 ನೇ ನಿಮಿಷದಲ್ಲಿ ಬ್ರಿಸಾ ಬ್ರಗ್ಗೆಸ್ಸರ್ ಅವರ ಉತ್ತಮ ಗೋಲುಗಳಿಸಿ ಸಮಬಲ ಸಾಧಿಸಲು ನೆರವಾದರು.

ABOUT THE AUTHOR

...view details