ಹೈದರಾಬಾದ್:ಭಾರತದ ಪುರುಷರ ಹಾಕಿ ತಂಡವು ತನ್ನ ರಕ್ಷಣೆಗೆ ಕೆಲಸ ಮಾಡಬೇಕಾಗಿದೆ ಎಂದು ಕೋಚ್ ಗ್ರಹಾಂ ರೀಡ್ ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಯುರೋಪ್ ಪ್ರವಾಸದಿಂದ ಆಗಮಿಸಿದ ಬಳಿಕ ಮಾತನಾಡಿದ ಅವರು, ತಮ್ಮ ಎದುರಾಳಿಗಳಿಗೆ ಆಟದ ಮಧ್ಯದಲ್ಲಿ ಚೇತರಿಸಿಕೊಳ್ಳಲು ಅವಕಾಶ ನೀಡುತ್ತೇವೆ. ಆ ರೀತಿ ಮಾಡದೇ, ನಮ್ಮ ರಕ್ಷಣೆ ಮಾಡಬೇಕು ಎಂದು ನನಗೆ ಈ ಪ್ರವಾಸದಲ್ಲಿ ತಿಳಿಯಿತು ಎಂದಿದ್ದಾರೆ.
ಇದನ್ನು ಓದಿ: ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗ ನೀಡಿದ ಅನುದಾನದ ವರದಿ
"ನಾವು ಬೆಂಗಳೂರಿನ ಎಸ್‌ಎಐಗೆ ಹಿಂದಿರುಗಿದ ನಂತರ ಈ ಪ್ರವಾಸದ ಬಗ್ಗೆ ಅವಲೋಕನ ಮಾಡಿದೆವು ಎಂದರು. ಮುಂಬರುವ ಅರ್ಜೆಂಟೀನಾ ಮತ್ತು ಟೋಕಿಯೊ ಒಲಿಂಪಿಕ್ಸ್ನಲ್ಲೂ ಉತ್ತಮ ಆಟ ಆಡಲು ಮುಂದಾಗುತ್ತೇವೆ. ನಮಗೆ ಅಗತ್ಯವಿರುವ ವಿಚಾರಗಳನ್ನು ಪಡೆದುಕೊಂಡು ಕೆಲಸ ಮಾಡುತ್ತೇವೆ. ಒಲಿಂಪಿಕ್ ವರ್ಷವು ಈಗ ನಮಗೆ ನಿಜವಾಗಿಯೂ ಪ್ರಾರಂಭವಾಗಿದೆ ಮತ್ತು ನಮ್ಮ ಕಲಿಕೆಗಳನ್ನು ವೇಗಗೊಳಿಸಬೇಕಾಗಿದೆ "ಎಂದು ಅವರು ಹೇಳಿದರು.
ಜರ್ಮನಿಯ ಕ್ರೆಫೆಲ್ಡ್ನಲ್ಲಿ ಭಾರತ ಜರ್ಮನಿ ವಿರುದ್ಧ 6-1 ಜಯ ಮತ್ತು 1-1 ಡ್ರಾ ಸಾಧಿಸಿತು ಇನ್ನು ಬೆಲ್ಜಿಯಂನ ಆಂಟ್ವೆರ್ಪ್ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 1-1 ಡ್ರಾ ಮತ್ತು 3-2 ಅಂತರದಿಂದ ಗೆಲುವು ಸಾಧಿಸುವಲ್ಲಿ ಟೀಂ ಇಂಡಿಯಾ ಹಾಕಿ ಯಶ ಸಾಧಿಸಿತ್ತು.