ಕರ್ನಾಟಕ

karnataka

ETV Bharat / sports

3-2 ಗೋಲುಗಳಿಂದ ಗ್ರೇಟ್ ಬ್ರಿಟನ್ ಮಣಿಸಿದ ಭಾರತದ ಪುರುಷರ ಹಾಕಿ ತಂಡ - 3-2 ಗೋಲುಗಳಿಂದ ಗ್ರೇಟ್ ಬ್ರಿಟನ್ ಮಣಿಸಿದ ಭಾರತದ ಪುರುಷರ ಹಾಕಿ ತಂಡ

ಭಾರತದ ಪುರುಷರ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ 3-2 ಗೋಲುಗಳಿಂದ ಜಯ ಸಾಧಿಸಿ ಯುರೋಪ್ ಪ್ರವಾಸವನ್ನು ಅಂತ್ಯಗೊಳಿಸಿದೆ.

Indian men's hockey team
ಭಾರತದ ಪುರುಷರ ಹಾಕಿ ತಂಡ

By

Published : Mar 9, 2021, 10:50 AM IST

ಆಂಟ್ವೆರ್ಪ್ (ಬೆಲ್ಜಿಯಂ): ಭಾರತದ ಪುರುಷರ ಹಾಕಿ ತಂಡವು ಸೋಮವಾರ ಗ್ರೇಟ್ ಬ್ರಿಟನ್ ವಿರುದ್ಧ 3-2 ಗೋಲುಗಳಿಂದ ಜಯ ಸಾಧಿಸಿ ಯುರೋಪ್ ಪ್ರವಾಸವನ್ನು ಅಂತ್ಯಗೊಳಿಸಿದೆ. ಆಟದ ಮೊದಲ 28 ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರ ಗೋಲು ಮತ್ತು 59 ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಗಳಿಸಿದ ಗೋಲು ಜಯಗಳಿಸಲು ಸಾಧ್ಯವಾಯಿತು. ಇನ್ನು ಗ್ರೇಟ್ ಬ್ರಿಟನ್ ಪರ ಆಡಿದ ಜೇಮ್ಸ್ ಗಾಲ್ (20 ') ಮತ್ತು ಸ್ಟ್ರೈಕರ್ ಆಡಮ್ ಫಾರ್ಸಿತ್ (55') ಗೋಲು ಗಳಿಸಿದರು.

ತಮ್ಮ ಹಿಂದಿನ ಪಂದ್ಯದಲ್ಲಿ, ಭಾರತದ ಸಿಮ್ರಾನ್‌ಜೀತ್ ಸಿಂಗ್ ಅವರು ಗೋಲು ಬಾರಿಸಿ ಸಮಬಲ ಸಾಧಿಸಲು ಸಹಕಾರಿಯಾದರು. ಜರ್ಮನಿ ವಿರುದ್ಧ, ಪಿಆರ್ ಶ್ರೀಜೇಶ್ ನೇತೃತ್ವದ ತಂಡವು 6-1 ಜಯ ಮತ್ತು 1-1ರ ಸಮಬಲವನ್ನು ಮೊದಲ ಮತ್ತು ಕ್ರಮವಾಗಿ ಎರಡನೇ ಪಂದ್ಯದಲ್ಲಿ ಪಡೆಯಿತು.

ಇನ್ನು ಈ ಪಂದ್ಯದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತು. ಆಟದ ಮೊದಲ ನಿಮಿಷದಲ್ಲಿಯೇ ಪೆನಾಲ್ಟಿ ಕಾರ್ನರ್ ಗಳಿಸಿತು. ಈ ಅವಕಾಶವನ್ನು ಭಾರತದ ವೈಸ್ ಕ್ಯಾಪ್ಟನ್ ಹರ್ಮನ್‌ಪ್ರೀತ್ ಸಿಂಗ್ ಅವರು ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ನೀಡುವಂತೆ ಪರಿವರ್ತಿಸಿದರು. ಆರಂಭಿಕ ಪ್ರಯೋಜನವು ಭಾರತೀಯ ಪುರುಷರು ತಮ್ಮ ಎದುರಾಳಿಗಳ ಮೇಲೆ ಒತ್ತಡ ಕಾಯ್ದುಕೊಳ್ಳಲು ಸಹಾಯ ಮಾಡಿತು. ಮೊದಲ ಭಾಗದಲ್ಲಿ 1-0 ಮುನ್ನಡೆ ಸಾಧಿಸಿತು.

ಗ್ರೇಟ್ ಬ್ರಿಟನ್ 20ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್ ಜೇಮ್ಸ್ ಗಾಲ್ ಅವರ ಫೀಲ್ಡ್ ಗೋಲಿನ ಮೂಲಕ ಸಮಬಲ ಸಾಧಿಸಿತು. ಬಳಿಕ ಮಂದೀಪ್​ ಸಿಂಗ್ ಅವರು 28 ನೇ ನಿಮಿಷದಲ್ಲಿ ಗೋಲು ಬಾರಿಸಿ 2-1 ಅಂತರ ಕಾಯ್ದುಕೊಂಡರು. ಇನ್ನು ಗೋಲು ಮುನ್ನಡೆ ಪಡೆದ ಭಾರತ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ನೀಡಿತು.

ABOUT THE AUTHOR

...view details