ಹೈದರಾಬಾದ್: ಮೂರು ವಾರಗಳ ಬಿಡುವಿನ ನಂತರ ನಾಯಕ ಮನ್ಪ್ರೀತ್ ಸಿಂಗ್ ಹಾಗೂ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಸೇರಿದಂತೆ 33 ಮಂದಿಯ ಸಂಭಾವ್ಯ ಹಾಕಿ ತಂಡ ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.
ಈ ಶಿಬಿರ ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (SAI)ದ ಕ್ಯಾಂಪಸ್ನಲ್ಲಿ ಆಯೋಜನೆಯಾಗಿದೆ. ಸಾಯ್ ಮತ್ತು ಹಾಕಿ ಇಂಡಿಯಾದ ಎಸ್ಒಪಿಗಳ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಗಳ ಪ್ರಕಾರ ತಂಡ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಲಿದೆ.
ಮೂರು ವಾರಗಳ ವಿರಾಮದ ನಂತರ ಎಲ್ಲಾ ಆಟಗಾರರು ಮಾನಸಿಕ ಮತ್ತು ದೈಹಿಕವಾಗಿ ಉತ್ತಮ ಭಾವನೆಯೊಂದಿಗೆ ಮರಳುತ್ತಿದ್ದಾರೆ ಎಂದು ಭಾವಿಸಿದ್ದೇನೆ. ಮುಂಬರುವ ಸ್ಪರ್ಧೆಗಳಿಗೆ ಸಿದ್ಧರಾಗುವುದೇ ನಮ್ಮ ಈ ಶಿಬಿರದ ಪ್ರಮುಖ ಗುರಿ ಎಂದು ಕೋಚ್ ಗ್ರಹಂ ರೀಡ್ ಹೇಳಿದ್ದಾರೆ.
ಭಾರತೀಯ ಪುರುಷರ ತಂಡ ಕಳೆದ ವರ್ಷ ಫೆಬ್ರವರಿ 22 ರಂದು ಎಫ್ಐಹೆಚ್ ಹಾಕಿ ಪ್ರೊ ಲೀಗ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿತ್ತು.
ಓದಿ: 2020ರ ಐಪಿಎಲ್ನಿಂದ ಹೊರಬಂದಿದ್ದಕ್ಕೆ ಕಾರಣ ಬಹಿರಂಗಗೊಳಿಸಿದ ರೈನಾ.. ಮತ್ತೇನಿಲ್ಲ ಆಗಿದ್ದಿಷ್ಟೇ..