ಟೋಕಿಯೋ: ಭಾರತ ಮಹಿಳಾ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ 2020ರ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 1-5ರ ಅಂತರದಿಂದ ಹೀನಾಯ ಸೋಲು ಕಂಡಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಕಳೆದ ಬಾರಿಯ ಒಲಿಂಪಿಕ್ಸ್ ರನ್ನರ್ ಅಪ್ ತಂಡದ ವಿರುದ್ಧ ಮೊದಲಾರ್ಧದಲ್ಲಿ ಸಮಬಲದ ಹೋರಾಟ ಪ್ರದರ್ಶನ ನೀಡಿದರು. 6ನೇ ನಿಮಿಷದಲ್ಲಿ ನೆದರ್ಲೆಂಡ್ಸ್ ತಂಡ ಗೋಲುಗಳಿಸಿದರೆ, ಇದಕ್ಕುತ್ತರವಾಗಿ 10ನೇ ನಿಮಿಷದಲ್ಲಿ ಭಾರತ ಮಹಿಳೆಯರು ಗೋಲು ಸಿಡಿಸಿ ಸಮಬಲಕ್ಕೆ ತಂದರು.
ಆದರೆ ದ್ವಿತೀಯಾರ್ಧದಲ್ಲಿ ಸಂಪೂರ್ಣ ಪ್ರಾಬಲ್ಯ ತೋರಿದ ನೆದರ್ಲೆಂಡ್ಸ್ ಮಹಿಳೆಯರು 4 ಗೋಲು ಸಿಡಿಸಿದರೆ ಭಾರತ ತಂಡದ ಒಂದೂ ಗೋಲು ಸಿಡಿಸಲು ಸಾಧ್ಯವಾಗಲಿಲ್ಲ.