ಕರ್ನಾಟಕ

karnataka

ETV Bharat / sports

FIH ಹಾಕಿ ಲೀಗ್‌: ಆಸೀಸ್​ ವಿರುದ್ಧ ಭಾರತಕ್ಕೆ ವಿರೋಚಿತ ಸೋಲು - ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಭಾರತದ ಪರ ರಾಜ್‌ಕುಮಾರ್‌ ಪಾಲ್‌ ಅವರು 36ನೇ ಮತ್ತು 47ನೇ ನಿಮಿಷದಲ್ಲಿ ಅವಳಿ ಗೋಲು ಹೊಡೆದರು . 52ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್‌ ಅವರಿಂದ ಗೋಲು ಸಿಡಿಯಿತು. ಉಳಿದ 8 ನಿಮಿಷಗಳಲ್ಲಿ ಪಂದ್ಯವನ್ನು ಸಮ ಬಲಕ್ಕೆ ತರಲು ಭಾರತ ಪ್ರಯತ್ನಿಸಿದ್ದರೂ ಯಶಸ್ಸು ಆಗಲಿಲ್ಲ.

FIH Hockey Pro League
ಹಾಕಿ ಲೀಗ್‌

By

Published : Feb 22, 2020, 4:39 AM IST

ಭುವನೇಶ್ವರ:ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ಹಾಕಿ ಲೀಗ್‌ ಕೂಟದ ರೋಚಕ ಪಂದ್ಯದಲ್ಲಿ ಆತಿಥೇಯ ಭಾರತ ದಿಟ್ಟ ಹೋರಾಟ ನಡೆಸಿದ್ದರೂ ಹಾಲಿ ಚಾಂಪಿಯನ್‌ ಆಸ್ಟ್ರೇಲಿ ಮುಂದೆ 3-4 ಗೋಲುಗಳಿಂದ ವಿರೋಚಿತ ಸೋಲು ಅನುಭವಿಸಿತು.

ಡೈಲಾನ್‌ ವೊದರ್‌ಸ್ಪೂನ್‌, ಟಾಮ್‌ ವಿಕ್‌ಹ್ಯಾಮ್‌, ಲಾಕ್ಲಾನ್‌ ಶಾರ್ಪ್‌ ಹಾಗೂ ಜೇಕಬ್‌ ಆ್ಯಂಡರ್ಸನ್‌ ಆಸ್ಟ್ರೇಲಿಯದ ಪರ ಗೋಲು ಗಳಿಸಿ, ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾರತದ ಪರ ರಾಜ್‌ಕುಮಾರ್‌ ಪಾಲ್‌ ಅವರು 36ನೇ ಮತ್ತು 47ನೇ ನಿಮಿಷದಲ್ಲಿ ಅವಳಿ ಗೋಲು ಹೊಡೆದರು . 52ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್‌ ಅವರಿಂದ ಗೋಲು ಸಿಡಿಯಿತು. ಉಳಿದ 8 ನಿಮಿಷಗಳಲ್ಲಿ ಪಂದ್ಯವನ್ನು ಸಮ ಬಲಕ್ಕೆ ತರಲು ಭಾರತ ಪ್ರಯತ್ನಿಸಿದ್ದರೂ ಯಶಸ್ಸು ಆಗಲಿಲ್ಲ.

ABOUT THE AUTHOR

...view details