ಕ್ರೆಫೆಲ್ಡ್ (ಜರ್ಮನಿ):ಭಾರತ ಪುರುಷರ ಹಾಕಿ ತಂಡವು ಜರ್ಮನಿ ವಿರುದ್ಧ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಟದಲ್ಲಿ ಜರ್ಮನ್‌ಪ್ರೀತ್ ಸಿಂಗ್ ಮತ್ತು ಮಾರ್ಟಿನ್ ಹೊನರ್ ಗೋಲು ಗಳಿಸಿ ಸಮಬಲ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2021ರ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ 6-1 ಗೋಲುಗಳ ಜಯ ಸಾಧಿಸಿದ ನಂತರ ಆತ್ಮವಿಶ್ವಾಸದಿಂದ ಆಡಿದ ವಿಶ್ವದ ನಂ .4 ಭಾರತ, ಅತಿಥೇಯ ಜರ್ಮನಿ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ತೋರಿದೆ. ನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದು, ಡಿಫೆಂಡರ್ ಜರ್ಮನ್‌ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಜಯಗಳಿಸುವಂತೆ ಮಾಡಿದರು.