ಢಾಕಾ :ಭಾರತ ಹಾಕಿ ತಂಡ ಏಷ್ಯನ್ ಹಾಕಿ ಚಾಂಪಿಯನ್ಶಿಪ್ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 6-0 ಗೋಲುಗಳ ಅಂತರದಿಂದ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಗೆಲುವು ಸಾಧಿಸಿದೆ. ಈಗಾಗಲೇ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದ್ದ ಭಾರತ ಇಂದು ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಸಿಡಿಸಿದ ಭಾರತಕ್ಕೆ ದಿಲ್ಪ್ರೀತ್ ಸಿಂಗ್ 2ನೇ ಗೋಲು ಸಿಡಿಸಿ ಮೊದಲಾರ್ಧದಲ್ಲಿ 2-0ಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು.