ನವದೆಹಲಿ :ಮೂರು ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತ ಬಲ್ಬೀರ್ ಸಿಂಗ್(ಸೀನಿಯರ್) ಅವರಿಗೆ ಇಂದು ಬೆಳಗ್ಗೆ ಹೃದಯಘಾತ ಸಂಭವಿಸಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಮೂರು ಒಲಿಂಪಿಕ್ಸ್ ಪದಕ ವಿಜೇತ ಹಾಕಿ ಲೆಜೆಂಡ್ ಬಲ್ಬೀರ್ ಸಿಂಗ್ಗೆ ಹೃದಯಾಘಾತ.. - Balbir Singh (Sr) suffers cardiac arrest,
1948,1952 ಹಾಗೂ 1956ರ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಬಲ್ಬೀರ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಬಲ್ಬೀರ್ ಸಿಂಗ್ಗೆ ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ.
![ಮೂರು ಒಲಿಂಪಿಕ್ಸ್ ಪದಕ ವಿಜೇತ ಹಾಕಿ ಲೆಜೆಂಡ್ ಬಲ್ಬೀರ್ ಸಿಂಗ್ಗೆ ಹೃದಯಾಘಾತ.. ಬಲ್ಬೀರ್ ಸಿಂಗ್ಗೆ ಹೃದಯಘಾತ](https://etvbharatimages.akamaized.net/etvbharat/prod-images/768-512-7179242-1090-7179242-1589359125380.jpg)
1948,1952 ಹಾಗೂ 1956ರ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಬಲ್ಬೀರ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಬಲ್ಬೀರ್ ಸಿಂಗ್ಗೆ ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ. ಅವರು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದಾರೆ. ಮಾರ್ಚ್ 8ರಂದು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರನನ್ನು(ಬಲ್ಬೀರ್ ಸಿಂಗ್) ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಆರೋಗ್ಯದಲ್ಲಿ ಸುಧಾರಿದೆಯಾದರೂ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ಮುಂದಿನ 24-48 ಗಂಟೆಯೊಳಗೆ ನಿರ್ಣಯಿಸಲಿದ್ದಾರೆ. ಸದ್ಯ ವೆಂಟಿಲೇಟರ್ನಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಬಲ್ಬೀರ್ ಸಿಂಗ್ ಮೊಮ್ಮಗ ಕಬೀರ್ ತಿಳಿಸಿದ್ದಾರೆ.