ಕರ್ನಾಟಕ

karnataka

ETV Bharat / sports

ಭಾರತದ ವನಿತೆಯರ ಬೆನ್ನಲ್ಲೇ ಟೋಕಿಯೊಗೆ ಟಿಕೆಟ್​​ ಕನ್ಫರ್ಮ್ ಮಾಡಿದ ಪುರುಷರ ಹಾಕಿ ತಂಡ - ಭಾರತೀಯ ಪುರುಷರ ಹಾಕಿ ತಂಡಕ್ಕೆ ಗೆಲುವು

ಮಹಿಳಾ ಹಾಕಿ ತಂಡದ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಬೆನ್ನಲ್ಲೇ ಭಾರತೀಯ ಪುರುಷರ ತಂಡ ಕೂಡ 2020ರ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದೆ.

ಪುರುಷರ ಹಾಕಿ ತಂಡ

By

Published : Nov 2, 2019, 11:18 PM IST

ಭುವನೇಶ್ವರ:ಕಳಿಂಗಾ ಸ್ಟೇಡಿಯಂನಲ್ಲಿ ನಡೆದ ಒಲಂಪಿಕ್ ಹಾಕಿ ಅರ್ಹತಾ ಪಂದ್ಯದಲ್ಲಿ ರಷ್ಯಾ ತಂಡವನ್ನ 7-1 ಗೋಲುಗಳ ಅಂತರದಲ್ಲಿ ಸದೆ ಬಡಿದ ಭಾರತೀಯ ಪುರುಷರ ಹಾಕಿ ತಂಡ 2020ರ ಟೋಕಿಯೊ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಮಹಿಳಾ ಹಾಕಿ ತಂಡ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಬೆನ್ನಲ್ಲೇ ಎಂಟು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಭಾರತೀಯ ಪುರುಷ ಹಾಕಿ ತಂಡ ಕೂಡ 2020 ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಇದಕ್ಕೂ ಮೊದಲು ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 4-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು. ಇದರೊಂದಿಗೆ ಎರಡು ಪಂದ್ಯಗಳಲ್ಲಿ ಒಟ್ಟಾರೆಯಾಗಿ 11-3 ಗೋಲುಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್​ಗೆ ಟಿಕೆಟ್ ಕನ್ಫರ್ಮ್​ಗೊಳಿಸಿದೆ.

ABOUT THE AUTHOR

...view details