ಹೈದರಾಬಾದ್ :ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಮೈದಾನಕ್ಕೆ ಹೆಜ್ಜೆಯಿಟ್ಟಾಗ ಭಯ ಮತ್ತು ಒತ್ತಡವಿಲ್ಲದೆ ಆಡಬೇಕೆಂದು ಬಯಸುವುದಾಗಿ ಕೋಚ್ ಶಾರ್ಡ್ ಮರಿನ್(Sjoerd Marijne) ಹೇಳಿದ್ದಾರೆ. ಆ ರೀತಿ ಆಡಿದರೆ ಫಲಿತಾಂಶ ಕೂಡ ತಾವೂ ಬಯಸಿದಂತೆ ಸಿಗುತ್ತದೆ ಎಂದು ಈಟಿವಿ ಭಾರತದ ಜೊತೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಮಹಿಳಾ ತಂಡದ ಸತತ ಎರಡನೇ ಬಾರಿಗೆ ಅರ್ಹತೆ ಪಡೆದಿದೆ. ಸುಧಾರಿತ ಫಿಟ್‌ನೆಸ್, ಉತ್ತಮ ಪಂದ್ಯದ ಅರಿವು, ಸ್ಪರ್ಧಾತ್ಮಕತೆ ಮತ್ತು ಪ್ರಬಲ ತಂಡಗಳ ವಿರುದ್ಧ ಅವರ ಇತ್ತೀಚಿನ ಕೌಶಲ್ಯ ಪ್ರದರ್ಶನದಿಂದಾಗಿ ರಾಣಿ ರಾಂಪಾಲ್ ನೇತೃತ್ವದ ತಂಡವು ಟೂರ್ನಿಯಲ್ಲಿ ಅತ್ಯುತ್ತಮ ಸ್ಥಾನಕ್ಕೇರಿದೆ.
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಮಹಿಳಾ ತಂಡದ ಅತ್ತ್ಯುತ್ತಮ ಸಾಧನೆ ಕಂಡು ಬಂದಿರುವುದು 1980ರಲ್ಲಿ. ಆ ಕ್ರೀಡಾಕೂಟದಲ್ಲಿ ಭಾರತದ ವನಿತೆಯರು 4ನೇ ಸ್ಥಾನ ಪಡೆದಿದ್ದರು. ಭಾರತ ತಂಡವೂ ಡಾರ್ಕ್ ಹಾರ್ಸ್ ಆಗುವ ಸಾಮರ್ಥ್ಯ ಹೊಂದಿದೆ. ಆದರೆ, ಅದೇ ಸಮಯದಲ್ಲಿ ಅವು ವಾಸ್ತವಾಗಿಯೂ ಕೂಡ ಪ್ರಬಲ ತಂಡವಾಗಿದೆ. ಟೋಕಿಯೋ ಮಹಾಕ್ರೀಡಾಕೂಟದಲ್ಲಿ ತಮ್ಮ ಆಟಗಾರ್ತಿಯರಿಗೆ ಎದುರಾಗುವ ಭಾರೀ ಸವಾಲನ್ನು ಆನಂದದಿಂದ ಎದುರಿಸಬೇಕೆಂದು ಈಟಿವಿ ಭಾರತಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.
ಫಿಟ್‌ನೆಸ್ ಎಂಬುದು ಭಾರತೀಯ ಹಾಕಿ ತಂಡದಲ್ಲಿ ಗಮನಾರ್ಹವಾಗಿ ಸುಧಾರಿಸಿದೆ. ಅವರ ಫಿಟ್‌ನೆಸ್ ಇತರ ಪ್ರಬಲ ತಂಡಗಳೊಂದಿಗೆ ಹೇಗೆ ಹೋಲಿಸುತ್ತೀರಿ?
ನಮ್ಮ ಆಟಗಾರ್ತಿಯರ ಫಿಟ್‌ನೆಸ್ ಉತ್ತಮವಾಗಿದೆ. ಆದರೆ, ಇತರ ತಂಡಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂದು ನನಗೆ ತಿಳಿದಿಲ್ಲ. ಏಕೆಂದರೆ, ನಾನು ಅವರಿಗೆ ತರಬೇತಿ ನೀಡಿಲ್ಲ. ನಾನು ಅದನ್ನು ಇತರ ದೇಶಗಳೊಂದಿಗೆ ಹೋಲಿಸುವುದಿಲ್ಲ.
ಟೋಕಿಯೋದಲ್ಲಿ ಫಿಟ್‌ನೆಸ್ ಅತ್ಯಂತ ನಿರ್ಣಾಯಕವಾಗಲಿದೆ. ಮೊದಲ ಪಂದ್ಯದಲ್ಲಿ ಎಲ್ಲರೂ ಸಿದ್ಧರಾಗುತ್ತಾರೆ ಮತ್ತು ಕೊನೆಯ ಪಂದ್ಯದವರೆಗೂ ಅವರು ಹೇಗೆ ನ್ಯಾಯಯುತವಾಗಲಿದ್ದಾರೆ ಎಂಬುದನ್ನು ನೀವು ಕಾದು ನೋಡಬೇಕು. ಆಟಗಾರ್ತಿಯರು ವರ್ಷದುದ್ದಕ್ಕೂ ತರಬೇತಿ ಪಡೆದಿರುವುದರಿಂದ ತಂಡದ ಪ್ರತಿಯೊಬ್ಬರೂ ತುಂಬಾ ಫಿಟ್ ಆಗಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಶ್ರೇಯಾಂಕದಲ್ಲಿ ಕೇವಲ ಎರಡು ತಂಡಗಳು ಭಾರತ ತಂಡಕ್ಕಿಂತ ಕೆಳಗಿವೆ. ಈ ತಂಡ ಡಾರ್ಕ್ ಹಾರ್ಸ್ ಅಥವಾ ಎಲ್ಲರಿಗೂ ಆಶ್ಚರ್ಯ ನೀಡಬಹದು ಎಂದು ನೀವು ಭಾವಿಸುತ್ತೀರಾ?
ಖಂಡಿತವಾಗಿಯೂ ಈ ತಂಡವು ಒಲಿಂಪಿಕ್ಸ್‌ನಲ್ಲಿ ಡಾರ್ಕ್ ಹಾರ್ಸ್ ಆಗಿರಬಹುದು. ನಮ್ಮೆಲ್ಲರಿಗೂ ವಿಶ್ವಾಸವಿದೆ. ನಮಗೆ ಶ್ರೇಯಾಂಕದ ಬಗ್ಗೆ ಅರಿವಿದೆ. ಆದರೆ, ಶ್ರೇಯಾಂಕಗಳ ಬಗ್ಗೆ ಯಾವುದೇ ಬೇಸರವನ್ನು ಅನುಭವಿಸುವುದಿಲ್ಲ. ಉನ್ನತ ರ್‍ಯಾಂಕ್ ತಂಡದ ವಿರುದ್ಧ ಆಡುವಾಗ, ನಾವು ಕೆಳ ರ್‍ಯಾಂಕ್ ತಂಡವೆಂದು ಯೋಚಿಸುವುದಿಲ್ಲ. ಇದು ನಮಗೆ ವಿಶ್ವಾಸವಿರುವುದರಿಂದ ಮತ್ತು ಪಂದ್ಯ ನಡೆಯುವ ಆ ನಿರ್ದಿಷ್ಟ ದಿನದಂದು ಶ್ರೇಯಾಂಕಗಳು ಅಪ್ರಸ್ತುತವಾಗುತ್ತದೆ. ಹಾಗಾಗಿ, ಈ ಭಾರತೀಯ ಮಹಿಳಾ ತಂಡದಿಂದ ನಿರೀಕ್ಷೆಗಳು ಈ ಸಮಯದಲ್ಲಿ ತುಂಬಾ ಹೆಚ್ಚಾಗಿದೆ. ಜೊತೆಗೆ ನಮ್ಮ ಗುಣಮಟ್ಟದಲ್ಲಿ ನಮಗೆ ವಿಶ್ವಾಸವಿದೆ ಮತ್ತು ಅದು ನನಗೆ ಅತ್ಯಂತ ಮುಖ್ಯವಾದ ವಿಷಯ.