ನವದೆಹಲಿ: ಒಡಿಶಾ ಸರ್ಕಾರದ ನಂತರ ಹಲವು ರಾಜ್ಯಗಳು ಹಾಕಿ ಕ್ರೀಡೆಗೆ ಮನ್ನಣೆ ಮತ್ತು ಪ್ರೋತ್ಸಾಹ ಆರಂಭಿಸುತ್ತಿದ್ದು, ಇದೀಗ ಆ ಸಾಲಿಗೆ ದೆಹಲಿ ಸರ್ಕಾರ ಕೂಡ ಸೇರಿಕೊಂಡಿದೆ. ಘುಮನ್ಹೇರಾ ಸ್ಟೇಡಿಯಂನಲ್ಲಿ ಹಾಕಿ ಅಕಾಡೆಮಿಯ ಜೊತೆಗೆ ಆಟಗಾರರಿಗಾಗಿ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಘೋಷಿಸಿದ್ದಾರೆ.
ದೆಹಲಿಯಲ್ಲಿ 4 ವಿಶ್ವದರ್ಜೆಯ ಹಾಕಿ ಮೈದಾನಗಳನ್ನು ನಿರ್ಮಿಸಲು ಅರವಿಂದ್ ಕೇಜ್ರಿವಾಲ್ ಸರ್ಕಾರ ತೀರ್ಮಾನಿಸಿದೆ. ಅದರಲ್ಲಿ ಘುಮನ್ಹೇರಾ ಸ್ಟೇಡಿಯಂನಲ್ಲೂ ಒಂದು ಮೈದಾನ ಇರಲಿದೆ ಎಂದು ಇದೇ ಕ್ರೀಡಾಂಗಣದಲ್ಲಿ ಛಜ್ಜುರಾಮ್ ಸ್ಮಾರಕ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸಿದ ನಂತರ ಹೇಳಿದ್ದಾರೆ.