ಚಂಡಿಗಢ/ಭೋಪಾಲ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಇತಿಹಾಸ ಬರೆದಿದ್ದು, ಇಡೀ ದೇಶವೇ ಸಾಧಕರನ್ನು ಕೊಂಡಾಡುತ್ತಿದೆ. ಪಂಜಾಬ್ ಹಾಗೂ ಮಧ್ಯಪ್ರದೇಶದ ಹಾಕಿ ಆಟಗಾರರಿಗೆ ಸಿಹಿಸುದ್ದಿ ನೀಡಿರುವ ಅಲ್ಲಿನ ಸರ್ಕಾರಗಳು, 1 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿವೆ.
ಇದನ್ನೂ ಓದಿ: Tokyo Olympics Hockey: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ!
"ಒಲಿಂಪಿಕ್ಸ್‌ನಲ್ಲಿ ಅತ್ಯಂತ ಅರ್ಹವಾದ ಪದಕವನ್ನು ಗಳಿಸಿರುವ ಸಂಭ್ರಮವನ್ನು ಆಚರಿಸಲು ನಿಮ್ಮ ಮರಳುವಿಕೆಗಾಗಿ ನಾವು ಕಾಯುತ್ತಿದ್ದೇವೆ. ಈ ಐತಿಹಾಸಿಕ ದಿನದಂದು ರಾಜ್ಯದ ಪ್ರತಿಯೊಬ್ಬ ಹಾಕಿ ಆಟಗಾರರಿಗೂ ತಲಾ ಒಂದು ಕೋಟಿ ರೂ. ನಗದು ಬಹುಮಾನ ಘೋಷಿಸಲು ಸಂತೋಷವಾಗುತ್ತಿದೆ" ಎಂದು ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಟ್ವೀಟ್ ಮಾಡಿದ್ದಾರೆ. ಇದರ ಜೊತೆ ಭಾರತೀಯ ಹಾಕಿ ತಂಡವನ್ನು ಶ್ಲಾಘಿಸಿದ್ದಾರೆ.