ಬೆಂಗಳೂರು :ಭಾರತೀಯ ಹಾಕಿ ತಂಡದ ಗೋಲ್ ಕೀಪರ್ ಬಿಚು ದೇವಿ ಖರಿಬಮ್ 2018ರ ಯೂಥ್ ಒಲಂಪಿಕ್ಸ್ನಲ್ಲಿ ‘ಗೋಲ್ಕೀಪರ್ ಆಫ್ ದಿ ಟೂರ್ನ್ಮೆಂಟ್’ ಎಂಬ ಹೆಗ್ಗಳಿಕೆ ಪಡೆದಿದ್ದರು. ಇದೀಗ ಬಿಚು ಒಲಿಂಪಿಕ್ಸ್‌ನಲ್ಲಿ ಆಡುವ ಗುರಿ ಹೊಂದಿದ್ದು, ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಬಿಚು ಈಗ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ಅನುಭವಿ ಪ್ರಚಾರಕರಾದ ಸವಿತಾ ಪುನಿಯಾ ಮತ್ತು ರಜನಿ ಎಟಿಮಾರ್ಪು ಅವರೊಂದಿಗೆ ಸ್ಪರ್ಧಿಸಬೇಕಾಗಿದೆ. ಆದರೆ, 20ರ ಆಟಗಾರ್ತಿ ಹಿರಿಯ ಆಟಗಾರೊಂದಿಗೆ ಇದೀಗ ತರಬೇತಿಯಲ್ಲಿದ್ದಾರೆ.
ಸವಿತಾ ದೀದಿ ಮತ್ತು ರಜನಿ ದೀದಿ ನನಗೆ ತುಂಬಾ ಸಹಾಯ ಮಾಡುತ್ತಾರೆ ಎಂದು ಬಿಚು ಹೇಳಿದ್ದಾರೆ. ನಾನು ನನ್ನ ಹಲವು ಅನುಮಾನಗಳನ್ನು ಅವರಲ್ಲಿ ಹಂಚಿಕೊಳ್ಳುತ್ತೇನೆ. ಅವರೇ ಅದಕ್ಕೆಲ್ಲ ಪರಿಹಾರ ಹೇಳುತ್ತಾರೆ. ಅವರ ದೌರ್ಬಲ್ಯಗಳ ಬಗ್ಗೆಯೂ ನನ್ನ ಬಳಿ ಕೇಳುತ್ತಾರೆ.
ಹಿರಿಯರ ಮಟ್ಟದಲ್ಲಿ ನಾನು ಹೊಸಬಳಾಗಿದ್ದರೂ ಅವುಗಳನ್ನು ಹೇಗೆ ಸರಿಪಡಿಸಬಹುದು ಎಂದು ಅವರು ನನ್ನನ್ನು ಕೇಳುತ್ತಾರೆ. ಅಷ್ಟೇ ಅಲ್ಲ, ಅವರು ನನ್ನನ್ನು ಸಹೋದರಿಯಂತೆ ನೋಡುತ್ತಾರೆ ಎಂದು ಬಿಚು ಸಂತಸ ಹಂಚಿಕೊಂಡಿದ್ದಾರೆ.