ಮ್ಯಾಡ್ರಿಡ್: ರಿಯಲ್ ಮ್ಯಾಡ್ರಿಡ್ ಕೋಚ್ ಮತ್ತು ಮಾಜಿ ಫುಟ್ಬಾಲ್ ಆಟಗಾರ, ಫುಟ್ಬಾಲ್ ದಂತಕತೆ ಜಿನೆಡಿನ್ ಜಿಡಾನೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಲಿಗಾ ಕ್ಲಬ್ ಶುಕ್ರವಾರ ಹೇಳಿದೆ. ಕೋವಿಡ್ ಇರುವುದು ಗೊತ್ತಾಗುತ್ತಿದ್ದಂತೆ ಅವರು ಕ್ವಾರಂಟೈನ್ಗೊಳಗಾಗಿದ್ದಾರೆ.
ಫುಟ್ಬಾಲ್ ದಂತಕತೆ ಜಿನೆಡಿನ್ ಜಿಡಾನೆಗೆ ಕೊರೊನಾ ಸೋಂಕು - ಜಿನೆಡಿನ್ ಜಿಡಾನೆಗೆ ಕೊರೊನಾ ಸೋಂಕು
ರಿಯಲ್ ಮ್ಯಾಡ್ರಿಡ್ ಕೋಚ್ ಮತ್ತು ಮಾಜಿ ಫುಟ್ಬಾಲ್ ಆಟಗಾರ ಜಿನೆಡಿನ್ ಜಿಡಾನೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಲಿಗಾ ಕ್ಲಬ್ ಶುಕ್ರವಾರ ಹೇಳಿದೆ.
![ಫುಟ್ಬಾಲ್ ದಂತಕತೆ ಜಿನೆಡಿನ್ ಜಿಡಾನೆಗೆ ಕೊರೊನಾ ಸೋಂಕು Zinedine Zidane blasts snow-hit pitch after goalless draw against Osasuna](https://etvbharatimages.akamaized.net/etvbharat/prod-images/768-512-10344590-thumbnail-3x2-sana.jpg)
ಜಿನೆಡಿನ್ ಜಿಡಾನೆಗೆ ಕೊರೊನಾ ದೃಢ
ಜಿಡಾನೆ ಸಂಪರ್ಕದಲ್ಲಿದ್ದ ಸಿಬ್ಬಂದಿಗೂ ಕೊರೊನಾಗೆ ಪರೀಕ್ಷೆ ನಡೆಸಲಾಗಿದ್ದು, ಸದ್ಯ ಕ್ವಾರಂಟೈನ್ಗೊಳಗಾಗಿದ್ದಾರೆ. ಹೀಗಾಗಿ, ತರಬೇತಿ ಅವಧಿಯಲ್ಲಿ ಭಾಗವಹಿಸಲಿಲ್ಲ. ಈ ವಾರದ ಆರಂಭದಲ್ಲಿ ಮೂರನೇ ವಿಭಾಗದ ಅಲ್ಕೊಯಾನೊ ವಿರುದ್ಧ ಕಪ್ ಸೋತಿದ್ದರು.
ಅಲಾವ್ಸ್‌ನಲ್ಲಿ ಶನಿವಾರ ನಡೆಯುವ ಪಂದ್ಯಕ್ಕೆ ಜಿಡಾನೆ ಅವರು ದೂರವಿರಲಿದ್ದಾರೆ. ಅವರ ಸಹಾಯಕ ಡೇವಿಡ್ ಬೆಟ್ಟೋನಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಿಯಲ್ ಮ್ಯಾಡ್ರಿಡ್ ಲೀಗ್ನಲ್ಲಿ ಎರಡನೇ ಸ್ಥಾನದಲ್ಲಿದೆ, ಅಟ್ಲೆಟಿಕೊ ಮ್ಯಾಡ್ರಿಡ್ಗಿಂತ ಏಳು ಅಂಕ ಹಿಂದುಳಿದಿದೆ.