ಕರ್ನಾಟಕ

karnataka

ETV Bharat / sports

ಮೆಸ್ಸಿ ಭೇಟಿಯಾದಾಗ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಷ್ಟೇ ಹೇಳುತ್ತೇನೆ: ಸುನೀಲ್ ಚೆಟ್ರಿ - ಫುಟ್​ಬಾಲ್ ಸುದ್ದಿಗಳು

ಗೊಲುಗಳ ಆಧಾರದಲ್ಲಿ ಚೆಟ್ರಿ ಪ್ರಸ್ತುತ ಆರು ಬಾರಿ ಬ್ಯಾಲನ್ ಡಿ'ಓರ್ ವಿಜೇತರಾಗಿರುವ ಲಿಯೋನೆಲ್ ಮೆಸ್ಸಿಗಿಂತ ಮುಂದಿದ್ದಾರೆ ಎಂದು ಹೋಲಿಕೆ ಮಾಡುತ್ತಾರೆ. ಪ್ರಸ್ತುತ ಚೆಟ್ರಿ 74 ಗೋಲು ಗಳಿಸಿದ್ದರೆ, ಮೆಸ್ಸಿ 72 ಗೋಲುಗಳಿಸಿದ್ದಾರೆ. ಆದರೆ, ಈ ಹೋಲಿಕೆಗಳನ್ನು ತಳ್ಳಿಹಾಕಿರುವ ಚೆಟ್ರಿ ತಮಗೂ ಮತ್ತು ಎಫ್‌ಸಿ ಬಾರ್ಸಿಲೋನಾದ ಫಾರ್ವರ್ಡ್ ಆಟಗಾರನ ನಡುವೆ ಹೋಲಿಕೆ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಸುನೀಲ್ ಚೆಟ್ರಿ ಮೆಸ್ಸಿ
ಸುನೀಲ್ ಚೆಟ್ರಿ ಮೆಸ್ಸಿ

By

Published : Jun 12, 2021, 7:40 PM IST

ದೋಹಾ: ಪ್ರಸ್ತುತ ಫುಟ್ಬಾಲ್​​ ಜಗತ್ತಿನಲ್ಲಿ ಶ್ರೇಷ್ಠ ಆಟಗಾರ ಎಂಬ ಸ್ಥಾನವನ್ನು ಕ್ರಿಶ್ಚಿಯಾನೋ ರೊನಾಲ್ಡೊ ಜೊತೆಗೆ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಹಂಚಿಕೊಂಡಿದ್ದಾರೆ. ಭಾರತ ತಂಡದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಕೂಡ ಮೆಸ್ಸಿ ಅವರ ಬಹುದೊಡ್ಡ ಅಭಿಮಾನಿಯಾಗಿದ್ದು, ಯಾವಾಗಲಾದರೂ ಅವರನ್ನು ಭೇಟಿಯಾದರೆ ಅವರ ಕೈ ಕುಲಕುವ ಮೂಲಕ ಅವರಿಗೆ ನಾನು ನಿಮ್ಮ ಅಭಿಮಾನಿ ಎಂದು ಹೇಳುತ್ತೇನೆ ಎಂದಿದ್ದಾರೆ.

ಗೊಲುಗಳ ಆಧಾರದಲ್ಲಿ ಚೆಟ್ರಿ ಪ್ರಸ್ತುತ ಆರು ಬಾರಿ ಬ್ಯಾಲನ್ ಡಿ'ಓರ್ ವಿಜೇತರಾಗಿರುವ ಲಿಯೋನೆಲ್ ಮೆಸ್ಸಿಗಿಂತ ಮುಂದಿದ್ದಾರೆ ಎಂದು ಹೋಲಿಕೆ ಮಾಡುತ್ತಾರೆ. ಪ್ರಸ್ತುತ ಚೆಟ್ರಿ 74 ಗೋಲು ಗಳಿಸಿದ್ದರೆ, ಮೆಸ್ಸಿ 72 ಗೋಲುಗಳಿಸಿದ್ದಾರೆ. ಆದರೆ, ಈ ಹೋಲಿಕೆಗಳನ್ನು ತಳ್ಳಿಹಾಕಿರುವ ಚೆಟ್ರಿ ತಮಗೂ ಮತ್ತು ಎಫ್‌ಸಿ ಬಾರ್ಸಿಲೋನಾದ ಫಾರ್ವರ್ಡ್ ಆಟಗಾರನ ನಡುವೆ ಹೋಲಿಕೆ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ನನ್ನ ಕುಟುಂಬದ ವಾಟ್ಸ್​ಆ್ಯಪ್​ ಗುಂಪು ಸೇರಿದಂತೆ ಸಾಕಷ್ಟು ಮಾತುಗಳು ಅದೇ ವಿಚಾರವಾಗಿ ಕೇಳಿಬರುತ್ತಿದೆ. ನಾನು ಎಲ್ಲರಿಗೂ ಇದೇ ಅಭಿಪ್ರಾಯವನ್ನು ಹೇಳುತ್ತಿರುತ್ತೇನೆ. ನನ್ನ ಮತ್ತು ಮೆಸ್ಸಿಯ ನಡುವೆ ಹೋಲಿಕೆ ಎಂದಿಗೂ ಸಾಧ್ಯವಿಲ್ಲ ಎಂಬುದುದು ಸತ್ಯ. ಅವರ ವಿಶ್ವದೆಲ್ಲೆಡೆ ಇರುವ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ. ನಮ್ಮಿಬ್ಬರ ನಡುವೆ ಹೋಲಿಕೆಯೇ ಇಲ್ಲ ಎಂದು AIFF ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ವಿಷಯದಲ್ಲಿ ಯಾರು ಕೂಡ ನನ್ನಷ್ಟು ಪಂದ್ಯಗಳನ್ನಾಡಿಲ್ಲ, ಈ ಭಾವನೆ ಚೆನ್ನಾಗಿರುತ್ತದೆ. ದೇಶದ ಪರ ನನ್ನಷ್ಟು ಗೋಲುಗಳನ್ನು ಯಾರು ಗಳಿಸಿಲ್ಲ. ಇದೇ ನನಗೆ ದೊಡ್ಡ ಗೌರವ. ಇಂತಹ ವಿಷಯಗಳು ಸುಂದರವಾಗಿರುತ್ತವೆ ಮತ್ತು ನನ್ನನ್ನು ಪ್ರೇರೇಪಿಸುತ್ತವೆ. ಆದರೆ, ನಾನು ಹೋಲಿಕೆ ಬಗ್ಗೆ ಹೆಚ್ಚಾಗಿ ಯೋಚಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಮೆಸ್ಸಿಯನ್ನು ಭೇಟಿ ಮಾಡಿದರೆ ಹೇಗೆ ಸ್ವಾಗತಿಸುತ್ತೀರಾ ಎಂದು ಕೇಳಿದ್ದಕ್ಕೆ, ಹಾಯ್​, ನಾನು ಸುನೀಲ್ ಚೆಟ್ರಿ, ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಕೈ ಕುಲುಕಿ ಮಾತನಾಡಿಸುತ್ತೇನೆ, ಇನ್ನು ಹೆಚ್ಚು ಅವರಿಗೆ ತೊಂದರೆ ಕೊಡಲೋಗುವುದಿಲ್ಲ, ಎಲ್ಲ ಅಭಿಮಾನಿಗಳಂತೆ ನಾನು ಒಬ್ಬ, ಅವರನ್ನು ಭೇಟಿ ಮಾಡಿದರೆ ನನಗೆ ತುಂಬಾ ಖುಷಿಯಾಗುತ್ತದೆ. ಅವರನ್ನು ಭೇಟಿ ಮಾಡಲಾಗದಿದ್ದರೂ ನನಗೇನು ಬೇಸರವಿಲ್ಲ. ನಾನು ದುಃಖದಲ್ಲಿದ್ದಾಗ ಮೆಸ್ಸಿ ವಿಡಿಯೋಗಳನ್ನು ನೋಡುತ್ತೇನೆ, ಅವರು ನನಗೆ ಖುಷಿ ತರುತ್ತವೆ ಎಂದು ಹೇಳಿಕೊಂಡಿದ್ದಾರೆ.

36 ವರ್ಷದ ನಾಯಕ ಭಾರತ ತಂಡದ ಜೂನ್ 15 ರಂದು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಕ್ಕಾಗಿ ತಯಾರಾಗುತ್ತಿದ್ದಾರೆ. ಈಗಾಗಲೇ ಫಿಫಾ ವಿಶ್ವಕಪ್​ ಕ್ವಾಲಿಫೈಯರ್​ನಿಂದ ಹೊರಬಿದ್ದಿರುವ ಭಾರತ ತಂಡದ ಎಫ್​ಸಿ ಏಷ್ಯಾಕಪ್​ ಕ್ವಾಲಿಫಿಕೇಷನ್​ಗಾಗಿ ಪ್ರಯತ್ನಿಸುತ್ತಿದೆ.

ಇದನ್ನು ಓದಿ:ಕೆಕೆಆರ್​ನಿಂದ ನಾನು ನಿರೀಕ್ಷಿಸಿದ ಬೆಂಬಲ ಸಿಗುತ್ತಿಲ್ಲ: ಕುಲ್ದೀಪ್ ಯಾದವ್​

ABOUT THE AUTHOR

...view details