ನವದೆಹಲಿ: ಐಪಿಎಲ್ ಮುಗಿಯುತ್ತಿದ್ದಂತೆ ಇಂಡಿಯನ್ ಸೂಪರ್ ಲೀಗ್ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಸಜ್ಜಾಗುತ್ತಿರುವುದಾಗಿ ತಿಳಿಸಿರುವ ಭಾರತ ತಂಡದ ನಾಯಕ ಸುನೀಲ್ ಚೆಟ್ರಿ, ಬಯೋಬಬಲ್ನಲ್ಲಿ ಇರುವುದು ಸುಲಭದ ಮಾತಲ್ಲ ಎಂದಿದ್ದಾರೆ.
ಬಯೋಬಬಲ್ನಲ್ಲಿ ತರಬೇತಿ ನಡೆಸುತ್ತಿರುವ 36 ವರ್ಷದ ಆಟಗಾರ ಉಳಿದ ಸಮಯದಲ್ಲಿ ಪುಸ್ತಕವನ್ನು ಓದುತ್ತಾ ಮತ್ತು ಹೆಸರಾಂತ ಬ್ರಾಡ್ಕಾಸ್ಟರ್ ಮತ್ತು ಇತಿಹಾಸಕಾರ ಸರ್ ಡೇವಿಡ್ ಅಟೆನ್ಬರೋ ಅವರ ಎ ಲೈಫ್ ಆನ್ ಅವರ ಪ್ಲಾನೆಟ್ ಕಾರ್ಯಕ್ರಮವನ್ನು ನೋಡುತ್ತಾ ಗೋವಾದಲ್ಲಿ ತಮ್ಮ ಕ್ವಾರಂಟೈನ್ ಅವಧಿಯನ್ನು ಕಳೆದಿರುವುದಾಗಿ ತಿಳಿಸಿದ್ದಾರೆ.
"ಇದು ಬಯೋ ಬಬಲ್ ಒಳಗೆ ನಮ್ಮ ಮೂರನೇ ವಾರವಾಗಿದೆ. ಇಲ್ಲಿನ ಜೀವನ ಸುಲಭವಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಖಂಡಿತವಾಗಿಯೂ ಇದು ನಮಗೆ ಅಗತ್ಯವಾಗಿ ಬೇಕಾಗಿದೆ." ಎಂದು ಚೆಟ್ರಿ ತಮ್ಮ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.