ನವದೆಹಲಿ:ಭಾರತದಲ್ಲಿ ಫುಟ್ಬಾಲ್ ಅಭಿವೃದ್ಧಿಗೆ ಬೇಕಾದ ಆರ್ಥಿಕ ಸಹಾಯ ಒದಗಿಸಲು ಕ್ರೀಡಾ ಇಲಾಖೆ ಸಿದ್ಧವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಇತ್ತೀಚೆಗೆ ಪುರುಷ ಮತ್ತು ಮಹಿಳಾ ಫುಟ್ಬಾಲ್ ತಂಡದಲ್ಲಿ ಕೆಲವು ಸುಧಾರಣೆಗಳಾಗಿವೆ. ಯುವ ಕ್ರೀಡಾಪಟುಗಳಿಗೆ ಬೇಕಾದ ತರಬೇತಿ ನೀಡಲು ಮತ್ತು ಹೊಸ ಹೊಸ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲು ಬೇಕಾದ ಆರ್ಥಿಕ ಸಹಾಯ ಒದಗಿಸಲು ಕ್ರೀಡಾ ಇಲಾಖೆ ಸಿದ್ಧವಿದೆ ಎಂದು ಹೇಳಿದ್ದಾರೆ.