ಸೌತಾಂಪ್ಟನ್ (ಹ್ಯಾಂಪ್ಶೈರ್): 1988ರ ನಂತರ ಮೊದಲ ಬಾರಿಗೆ ಪ್ರೀಮಿಯರ್ ಲೀಗ್ನಲ್ಲಿ, ಸೌತಾಂಪ್ಟನ್ ಇಂಗ್ಲೆಂಡ್‌ನ ಉನ್ನತ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ.
ಪ್ರೀಮಿಯರ್ ಲೀಗ್: 32 ವರ್ಷಗಳಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ತಲುಪಿದ ಸೌತಾಂಪ್ಟನ್ - ಸೌತಾಂಪ್ಟನ್ಗೆ ಇಂಗ್ಲೆಂಡ್‌ನ ಉನ್ನತ ವಿಭಾಗದಲ್ಲಿ ಮೊದಲ ಸ್ಥಾನ
ಸೌತಾಂಪ್ಟನ್ ತಂಡವು ತನ್ನ ಅತ್ಯುತ್ತಮ ಆಟಗಾರರಿಲ್ಲದಿದ್ದರೂ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಸ್ಥಾನದಲ್ಲಿದೆ.
![ಪ್ರೀಮಿಯರ್ ಲೀಗ್: 32 ವರ್ಷಗಳಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ತಲುಪಿದ ಸೌತಾಂಪ್ಟನ್ football](https://etvbharatimages.akamaized.net/etvbharat/prod-images/768-512-9461965-147-9461965-1604726084446.jpg)
football
ಇಂಗ್ಲೆಂಟ್ನ ದಕ್ಷಿಣ ಕರಾವಳಿಯ ಈ ತಂಡ, ಅತ್ಯುತ್ತಮ ಆಟಗಾರರಿಲ್ಲದೇ ಶುಕ್ರವಾರ ಈ ಸಾಧನೆ ಮಾಡಿ ಗಮನ ಸೆಳೆದಿದೆ. ಗಾಯಗೊಂಡ ಟಾಪ್ ಸ್ಕೋರರ್ ಡ್ಯಾನಿ ಇಂಗ್ಸ್ ಅನುಪಸ್ಥಿತಿಯನ್ನು ಸೌತಾಂಪ್ಟನ್ 2-0 ಗೋಲುಗಳಿಂದ ನ್ಯೂಕ್ಯಾಸಲ್ ತಂಡವನ್ನು ಸೋಲಿಸಿದೆ.
ತಂಡಕ್ಕಾಗಿ ಸ್ಟ್ರೈಕರ್ ಚೆ ಆಡಮ್ಸ್ ಮತ್ತು ಮಿಡ್ ಫೀಲ್ಡರ್ ಸ್ಟುವರ್ಟ್ ಆರ್ಮ್‌ಸ್ಟ್ರಾಂಗ್ ಸೇಂಟ್ ಗೋಲು ಗಳಿಸಿದರು.