ಲಂಡನ್: ಸೆನೆಗಲ್ ಲೆಜೆಂಡ್ ಮಿಡ್ಫೀಲ್ಡರ್ ಪಾಪಾ ಬವುಬಾ ಡಿಯೋಪ್ ತಮ್ಮ 42ನೇ ವರ್ಷದಲ್ಲಿ ನಿಧನರಾಗಿದ್ದಾರೆ. ಅವರು ಲೌ ಗೆಹ್ರಿಗ್ ಅಥವಾ ಮೋಟಾರ್ ನ್ಯೂರಾನ್ ಎಂದು ಕರೆಯಲಾಗುವ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಸೆನೆಗಲ್ಗೆ 63 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಡಿಯೋಪ್ 2002ರಲ್ಲಿ ನಡೆದಿದ್ದ ಫೀಫಾ ವಿಶ್ವಕಪ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 1-0 ಗೋಲಿನಿಂದ ಗೆದ್ದಿದ್ದ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಈ ಪಂದ್ಯಾವಳಿಯಲ್ಲಿ ಸೆನೆಗಲ್ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿತ್ತು.