ಕೊಚ್ಚಿ:ಕೇರಳ ಬ್ಲಾಸ್ಟರ್ಸ್ ಎಫ್‌ಸಿ (ಕೆಬಿಎಫ್‌ಸಿ) ಪ್ರಸ್ತುತ ಒಪ್ಪಂದಕ್ಕೆ ಹೆಚ್ಚುವರಿಯಾಗಿ ಮೂರು ವರ್ಷಗಳ ಕಾಲ ಪ್ರತಿಭಾವಂತ ಮಿಡ್ ಫೀಲ್ಡರ್ ಸಹಲ್ ಅಬ್ದುಲ್ ಸಮದ್ ಅವರ ಗುತ್ತಿಗೆ ವಿಸ್ತರಣೆಯನ್ನು ಪ್ರಕಟಿಸಿದೆ.
ಕೇರಳದ ಕಣ್ಣೂರಿನ 23 ವರ್ಷದ ಸಹಲ್ ಅಬ್ದುಲ್ ಸಮದ್ 2025 ರವರೆಗೆ ಕ್ಲಬ್‌ನ ಭಾಗವಾಗಲಿದ್ದಾರೆ. ಬಾಲ್ಯದಿಂದಲೂ ಫುಟ್ಬಾಲ್ ನನ್ನ ಅತಿದೊಡ್ಡ ಉತ್ಸಾಹ ಎಂದು ಸಮದ್ ಹೇಳಿದ್ದಾರೆ. ನನ್ನ ವೃತ್ತಿಜೀವನದ ಆರಂಭದಿಂದಲೂ, ನಾನು ಕೆಬಿಎಫ್‌ಸಿ ಭಾಗವಾಗಿ ಅತಿ ಹೆಚ್ಚು ಅಭಿಮಾನಿಗಳ ಮುಂದೆ ಆಡುವುದನ್ನು ಆನಂದಿಸಿದೆ. ಕ್ರೀಡೆಯೊಂದಿಗೆ ನನ್ನ ಪ್ರಯಾಣವು ಇದೀಗ ಪ್ರಾರಂಭವಾಗಿದೆ. ಮುಂದಿನ ವರ್ಷಗಳಲ್ಲಿ ಕ್ಲಬ್‌ಗಾಗಿ ಮತ್ತು ನನಗಾಗಿ ಹೆಚ್ಚಿನ ಸಾಧನೆಗಳನ್ನು ಸಾಧಿಸಬೇಕೆಂದು ನಾನು ಭಾವಿಸುತ್ತೇನೆ. ಇದು ನನ್ನ ರಾಜ್ಯ, ನನ್ನ ಜನರು ಮತ್ತು ನನ್ನ ಮನೆ ಎಂದಿದ್ದಾರೆ.