ಟುರಿನ್ (ಇಟಲಿ):ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೊಡ್ರಿಗಸ್ ದಂಪತಿ ಇಟಲಿಯ ಪರ್ವತ ರೆಸಾರ್ಟ್‌ನಲ್ಲಿ ಹಿಮ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆ ವಿಡಿಯೋ ರೊನಾಲ್ಡೋಗೆ ಕಂಟಕವಾಗಿದೆ.
ಕೊರೊನಾ ನಿಯಮ ಉಲ್ಲಂಘನೆ: ಇಟಲಿಯಲ್ಲಿ ಬರ್ತಡೇ ಸೆಲೆಬ್ರೇಷನ್ ಮಾಡಿದ ರೊನಾಲ್ಡೊ ದಂಪತಿ ವಿಚಾರಣೆ - Ronaldo under investigation over allegedly breaching COVID-19 rules
ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೊಡ್ರಿಗಸ್ ದಂಪತಿ ವಿರುದ್ಧ ಕೊರೊನಾ ನಿಯಮ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ರೊನಾಲ್ಡೊ ದಂಪತಿ
ರೊನಾಲ್ಡೊ ದಂಪತಿ ಇಟಲಿಯಲ್ಲಿ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಇಟಲಿಗೆ ತೆರಳಿದ್ದಲ್ಲದೆ, ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಲೆ ಡಿ ಆಸ್ಟಾ ಪೊಲೀಸರು ವಿಚಾರಣೆ ನಡೆಸಲಿದ್ದು, ದಂಪತಿಗಳು ತನಿಖೆ ಎದುರಿಸಬೇಕಾಗಿದೆ.
ಇಟಲಿಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಆರೆಂಜ್ ಝೋನ್ ನಿರ್ಮಾಣವಾಗಿದೆ. ಅಗತ್ಯತೆ ಆಧಾರದಲ್ಲಿ ಮಾತ್ರ ದೇಶಕ್ಕೆ ಪ್ರಯಾಣ ಬೆಳೆಸುವ ಅವಕಾಶವನ್ನು ಸರ್ಕಾರ ನೀಡಿದೆ. ಆದರೆ ಹುಟ್ಟು ಹಬ್ಬ ಆಚರಣೆಗಾಗಿ ಅಲ್ಲಿನ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.