ಕರ್ನಾಟಕ

karnataka

ETV Bharat / sports

ಅಧಿಕೃತವಾಗಿ ಮ್ಯಾಂಚೆಸ್ಟರ್​ ಯುನೈಟೆಡ್​ ಸೇರಿದ ರೊನಾಲ್ಡೊ - ಮ್ಯಾಂಚೆಸ್ಟರ್​ ಯುನೈಟೆಡ್​ ಸೇರಿದ ರೊನಾಲ್ಡೊ

ಮ್ಯಾಂಚೆಸ್ಟರ್​ ಯುನೈಟೆಡ್​ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಕ್ಲಬ್​, ಕಳೆದ ಶುಕ್ರವಾರ ನಾನು ಕ್ಲಬ್​ ಸೇರಿಕೊಳ್ಳುತ್ತಿದ್ದೇನೆ ಎಂದು ತಿಳಿದಾಗಿನಿಂದ ನನಗೆ ಬಂದಿರುವ ಸಂದೇಶಗಳು ನನ್ನನ್ನು ಭಾವನಾತ್ಮಕವನ್ನಾಗಿಸಿದೆ ಎಂದು ರೊನಾಲ್ಡೊ ಹೇಳಿದ್ದಾರೆ.

Ronaldo completes return to Manchester United after 12 years
ಕ್ರಿಶ್ಚಿಯಾನೋ ರೊನಾಲ್ಡೊ

By

Published : Aug 31, 2021, 8:37 PM IST

ಮ್ಯಾಂಚೆಸ್ಟರ್​: ಪೋರ್ಚುಗಲ್ ಫುಟ್ಬಾಲ್​ ​ ತಂಡದ ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ ಮಂಗಳವಾರ ಅಧಿಕೃತವಾಗಿ 12 ವರ್ಷಗಳ ಬಳಿಕ ಮ್ಯಾಂಚೆಸ್ಟರ್​ ಯುನೈಟೆಡ್​ ಯುನೈಟೆಡ್ ಕ್ಲಬ್​ಗೆ ಸೇರಿಕೊಂಡಿದ್ದಾರೆ.

ಮ್ಯಾಂಚೆಸ್ಟರ್​ ಯುನೈಟೆಡ್​ ಶುಕ್ರವಾರ ಜುವೆಂಟಸ್​ ಕ್ಲಬ್​ನೊಂದಿಗೆ 23 ಮಿಲಿಯನ್ ಯೂರೋ ಒಪ್ಪಂದ ಮಾಡಿಕೊಂಡು ರೊನಾಲ್ಡೊ ಅವರನ್ನು 2 ವರ್ಷಗಳ ಅವಧಿಗೆ ವರ್ಗಾವಣೆ ಮಾಡಿಕೊಂಡಿತ್ತು. ಇಂದು ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ 5 ಬಾರಿ ಬಲೋನ್​ ಡಿ'ಓರ್​ ವಿಜೇತ ಅಧಿಕೃತವಾಗಿ ಜುವೆಂಟಸ್​ಗೆ ಗುಡ್​ ಬೈ ಹೇಳಿ ತಮ್ಮ ವೃತ್ತಿ ಜೀವನ ಆರಂಭಿಸಿದ ಕ್ಲಬ್​ಗೆ ಮರಳಿದ್ದಾರೆ.

ಮ್ಯಾಂಚೆಸ್ಟರ್​ ಯುನೈಟೆಡ್​ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಕ್ಲಬ್​, ಕಳೆದ ಶುಕ್ರವಾರ ನಾನು ಕ್ಲಬ್​ ಸೇರಿಕೊಳ್ಳುತ್ತಿದ್ದೇನೆ ಎಂದು ತಿಳಿದಾಗಿನಿಂದ ನನಗೆ ಬಂದಿರುವ ಸಂದೇಶಗಳು ನನ್ನನ್ನು ಭಾವನಾತ್ಮಕವನ್ನಾಗಿಸಿದೆ ಎಂದು ರೊನಾಲ್ಡೊ ಹೇಳಿದ್ದಾರೆ.

" ನಾನು ಓಲ್ಡ್ ಟ್ರಾಫೋರ್ಡ್‌ನಲ್ಲಿ ತುಂಬಿದ ಸ್ಟೇಡಿಯಂ ಮುಂದೆ ಆಡಲು ಮತ್ತು ಎಲ್ಲ ಅಭಿಮಾನಿಗಳನ್ನು ಮತ್ತೆ ನೋಡುವುದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳ ನಂತರ ತಂಡದೊಂದಿಗೆ ಸೇರಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ನಾವು ಬಹಳ ಯಶಸ್ವಿಯಾದ ಋತುವನ್ನು ಹೊಂದಲಿದ್ದೇವೆ ಎಂಬ ವಿಶ್ವಾಸವಿದೆ ರೊನಾಲ್ಡೊ ತಿಳಿಸಿದ್ದಾರೆ.

ರೊನಾಲ್ಡೊ ಬದಲೀ ಆಟಗಾರನನ್ನು ಘೋಷಿಸಿದ ಜುವೆಂಟಸ್​:

ರೊನಾಲ್ಡೊರನ್ನು ಬೀಳ್ಕೊಡುಗೆ ಕೊಟ್ಟ ಕೆಲವೇ ನಿಮಿಷಗಳಲ್ಲಿ ಬದಲೀ ಆಟಗಾರರನನ್ನು ಘೋಷಿಸಿದೆ. ಇಟಲಿಯನ್​ ಕ್ಲಬ್​ ತಮ್ಮದೇ ದೇಶದ ಮೊಯಿಸ್ ಕೀನ್​ರನ್ನು ಎವರ್ಟನ್​ ಕ್ಲಬ್​ನಿಂದ 2 ವರ್ಷದ ಅವಧಿಗೆ ಲೋನ್​ ಡೀಲ್ ಮೂಲಕ ವರ್ಗಾವಣೆ ಮಾಡಿಕೊಂಡಿದೆ. ಇದಕ್ಕಾಗಿ ಕೀನ್​ಗೆ 7 ಮಿಲಿಯನ್ ಯೋರೋ ನೀಡಿದರೆ, ವರ್ಗಾವಣೆಗಾಗಿ 28 ಮಿಲಿಯನ್​ ಯೂರೋಗಳನ್ನು ಕ್ಲಬ್​ಗೆ ನೀಡಿದೆ.

ಇದನ್ನು ಓದಿ:ರೊನಾಲ್ಡೊಗೆ ವಾರಕ್ಕೆ ₹4.85 ಕೋಟಿ ವೇತನ: ಗಳಿಕೆಯಲ್ಲಿ ಮೆಸ್ಸಿಗೆ ಅಗ್ರಸ್ಥಾನ

ABOUT THE AUTHOR

...view details