ರೋಮ್:ಜುವೆಂಟಸ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಬುಧವಾರ ನಾಪೋಲಿ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸುವ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ಸಾರ್ವಕಾಲಿಕ ಅತ್ಯಧಿಕ ಗೋಲು ಬಾರಿಸಿದ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಪೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜುವೆಂಟಸ್ 2-0 ಗೋಲುಗಳಲ್ಲಿ ಗೆಲುವು ಸಾಧಿಸಿ 9ನೇ ಬಾರಿಗೆ ಇಟಾಲಿಯನ್ ಸೂಪರ್ ಕಪ್ ಎತ್ತಿ ಹಿಡಿಯಿತು.
ರೊನಾಲ್ಡೊ 64ನೇ ನಿಮಿಷದಲ್ಲಿ ತಂಡದ 2ನೇ ಗೋಲು ಗಳಿಸಿದರು. ಇದು ಅವರ ವೃತ್ತಿ ಜೀವನದ 760ನೇ ಗೋಲಾಗಿದ್ದು, ಸ್ಪರ್ಧಾತ್ಮಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸಾರ್ವಕಾಲಿಕ ಗರಿಷ್ಠ ಗೋಲು ಬಾರಿಸಿದ ದಾಖಲೆಗೆ ಪಾತ್ರರಾದರು. ಅವರು ರಿಯಲ್ ಮ್ಯಾಡ್ರಿಡ್ ಪರ 450, ಮ್ಯಾಂಚೆಸ್ಟರ್ ಯುನೈಟೆಡ್ ಪರ 118, ಪೋರ್ಚುಗಲ್(ನ್ಯಾಷನಲ್) ಪರ 102, ಸ್ಪೋರ್ಟಿಂಗ್ ಸಿಪಿ ಪರ 5, ಜುವೆಂಟಸ್ ಪರ 85 ಗೋಲು ಗಳಿಸಿದ್ದಾರೆ.
ಸಾರ್ವಕಾಲಿಕ ಗರಿಷ್ಠ ಗೋಲುಗಳ ಪಟ್ಟಿಯ ಎರಡನೇ ಸ್ಥಾನದದಲ್ಲಿ ಆಸ್ಟ್ರಿಯನ್ ಆಟಗಾರ ಜೋಸೆಫ್ ಬಿಕಾನ್ ಇದ್ದು, ಅವರು 1932-1955ರ ಅವಧಿಯಲ್ಲಿ 530 ಪಂದ್ಯಗಳಲ್ಲಿ 759 ಗೋಲು ಗಳಿಸಿದ್ದರು. ಪೀಲೆ 1956-77ರವರೆಗೆ 757 ಗೋಲು ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ:ಭಾರತಕ್ಕೆ ಆಗಮಿಸಿದ ಟೀಂ ಇಂಡಿಯಾ ಆಟಗಾರರು: ಕ್ವಾರಂಟೈನ್ ಇಲ್ಲದೇ ಮನೆ ತಲುಪಿದ ಪ್ಲೇಯರ್ಸ್