ಕರ್ನಾಟಕ

karnataka

ETV Bharat / sports

ನಕಲಿ ಪಾಸ್​ಪೋರ್ಟ್​ ಬಳಕೆ: ಬ್ರೆಜಿಲ್​ನ ಮಾಜಿ ಫುಟ್ಬಾಲ್​ ಆಟಗಾರ ರೊನಾಲ್ಡಿನೋ ಬಂಧನ - ಬ್ರೆಜಿಲ್​ನ ಮಾಜಿ ಫುಬ್ಬಾಲ್​ ಆಟಗಾರ ರೊನಾಲ್ಡಿನೋ ಬಂಧನ

ನಕಲಿ ಪಾಸ್​ಪೋರ್ಟ್​ ಬಳಕೆ ಮಾಡಿದ ಆರೋಪದ ಮೇಲೆ 39 ವರ್ಷದ ರೋನಾಲ್ಡಿನೋ ಹಾಗೂ ಅವರ ಸಹೋದರ 49 ವರ್ಷದ ರಾಬರ್ಟೊ ಆಸೀಸ್​ ಅವರನ್ನು ಪೆರಾಗ್ವೆಯ ರೆಸಾರ್ಟ್ ಯಾಚ್ ಮತ್ತು ಗಾಲ್ಫ್ ಕ್ಲಬ್‌ನಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ.

Ronaldinho arrested
ರೊನಾಲ್ಡಿನೋ ಬಂಧನ

By

Published : Mar 5, 2020, 8:12 PM IST

ಅಸನ್ಸಿಯನ್(ಪರಾಗ್ವೆ): ಬ್ರೆಜಿಲ್​ ಹಾಗೂ ಬಾರ್ಸಿಲೋನಾದ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೋ ಹಾಗೂ ಅವರ ಸಹೋದರ ರೊಬರ್ಟೊ ಆಸಿಸ್​ ಅವರನ್ನು ನಕಲಿ ಪಾಸ್​ಪೋರ್ಟ್​ ಬಳಕೆ ಮಾಡಿ ಅಕ್ರಮವಾಗಿ ಪೆರಾಗ್ವೆ ದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

39 ವರ್ಷದ ರೋನಾಲ್ಡಿನೋ, 49 ವರ್ಷದ ರೊಬರ್ಟೊ ಆಸೀಸ್​ ಅವರನ್ನು ಪೆರಾಗ್ವೆಯ ರೆಸಾರ್ಟ್ ಯಾಚ್ ಮತ್ತು ಗಾಲ್ಫ್ ಕ್ಲಬ್‌ನಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ.

ರೊನಾಲ್ಡಿನೋ ನಕಲಿ ಪಾಸ್ ಪೋರ್ಟ್​ ಬಳಸಿದ್ದಾರೆ. ಅದೊಂದು ದೊಡ್ಡ ಅಪರಾಧವಾದ್ದರಿಂದ ಅವರನ್ನು ಬಂಧಿಸಲು ಆಜ್ಞೆ ಮಾಡಲಾಗಿತ್ತು. ನಾವು ಅವರು ಕ್ರೀಡಾ ಜನಪ್ರಿಯತೆಯನ್ನು ಗೌರವಿಸುತ್ತೇವೆ. ಆದರೆ ಕಾನೂನನ್ನು ಯಾರಾದರೂ ಗೌರವಿಸಬೇಕು ಎಂದು ಪೆರಾಗ್ವೆ ಆಂತರಿಕ ವ್ಯವಹಾರಗಳ ಸಚಿವ ಯೂಕ್ಲೈಡ್ಸ್ ಅಸೆವೆಡೊ ಸ್ಥಳೀಯ ರೇಡಿಯೋ ಸ್ಟೇಷನ್​ಗೆ ಮಾಹಿತಿ ನೀಡಿದ್ದಾರೆ.

ರೊನಾಲ್ಡಿನೋ ನಕಲಿ ಪಾಸ್​ಪೋರ್ಟ್​

ರೊನಾಲ್ಡಿನೋ ಹಾಗೂ ಅವರ ಸಹೋದರ ಮಕ್ಕಳ ಚಾರಿಟಿ ಅಭಿಯಾನ ಹಾಗೂ ಅವರ ವೃತ್ತಿ ಜೀವನ ಕುರಿತ ಪುಸ್ತಕ ಬಿಡುಗಡೆಗಾಗಿ ಬುಧವಾರ ಪೆರಾಗ್ವೆಗೆ ಆಗಮಿಸಿದ್ದರು.

ರೊನಾಲ್ಡಿನೊ

ರೋನಾಲ್ಡಿನೋ ಈ ರೀತಿ ನಕಲಿ ಪಾಸ್​ಪೋರ್ಟ್​​ ಬಳಸಿ ಸಿಕ್ಕಿ ಬಿದ್ದಿರುವುದು ಇದೇ ಮೊದಲೇನಲ್ಲ. 2015ರಲ್ಲಿ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಬ್ರೆಜಿಲ್​ ಪೊಲೀಸರು ರೊನಾಲ್ಡಿನೋ ದಾಖಲಾತಿಗಳನ್ನು ಜಪ್ತಿ ಮಾಡಿದ್ದರು.

ರೊನಾಲ್ಡಿನೋ 2018ರಲ್ಲಿ ತಮ್ಮ ಫುಟ್​ಬಾಲ್​ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಅವರು 2002ರಲ್ಲಿ ಬ್ರೆಜಿಲ್​ಗೆ ಫಿಫಾ ವಿಶ್ವಕಪ್​ ತಂದುಕೊಟ್ಟಿದ್ದರು.

ABOUT THE AUTHOR

...view details