ಪ್ಯಾರಿಸ್: ತಮ್ಮ ವೃತ್ತಿ ಜೀವನವನ್ನೆಲ್ಲ ಬಾರ್ಸಿಲೋನಾ ಕ್ಲಬ್ನಲ್ಲಿ ಕಳೆದಿದ್ದ ಅರ್ಜೆಂಟೀನಾ ಫುಟ್ಬಾಲರ್ ಲಿಯೋನಲ್ ಮೆಸ್ಸಿ ಒಪ್ಪಂದ ಅಂತ್ಯಗೊಂಡಿದ್ದು, ಇದೀಗ ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ಗೆ ಸೇರಲಿದ್ದಾರೆ ಎಂದು ಈ ಸಂಧಾನದ ಬಗ್ಗೆ ತೀರಾ ಹತ್ತಿರದಿಂದ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವರದಿಯ ಪ್ರಕಾರ 34 ವರ್ಷದ ಅರ್ಜೆಂಟೀನಾ ಸ್ಟಾರ್ ಪೆಎಸ್ಜಿ ಜೊತೆಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.
ಈ ಒಪ್ಪಂದದ ಪ್ರಕಾರ ಲಿಯೋನಲ್ ಮೆಸ್ಸಿ ವಾರ್ಷಿಕವಾಗಿ ಸುಮಾರು 35 ಮಿಲಿಯನ್ಸ್ ಯೂರೋ(ಸುಮಾರು 305) ಕೋಟಿ ರೂಪಾಯಿಗಳಿಸಲಿದ್ದಾರೆ ಎಂದು ತಿಳಿದು ಬಂದಿದೆ.