ಬಾಂಬೋಲಿಮ್ (ಗೋವಾ): ಜಿಎಂಸಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿತು.
ಇಂಡಿಯನ್ ಸೂಪರ್ ಲೀಗ್: ಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧ ಡ್ರಾ ಸಾಧಿಸಿದ ಮುಂಬೈ ಸಿಟಿ ಎಫ್‌ಸಿ - ಜಮ್ಶೆಡ್ಪುರ ಎಫ್‌ಸಿ
ಮುಂಬೈ ಸಿಟಿ ಎಫ್‌ಸಿ ಮತ್ತು ಜಮ್‌ಶೆಡ್‌ಪುರ ಎಫ್‌ಸಿ ನಡುವೆ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.
ಜಮ್ಶೆಡ್ಪುರ ಎಫ್‌ಸಿ ವಿರುದ್ಧ ಡ್ರಾ ಸಾಧಿಸಿದ ಮುಂಬೈ ಸಿಟಿ ಎಫ್‌ಸಿ
ಪಂದ್ಯ ಆರಂಭವಾದ 9 ನಿಮಿಷಗಳಲ್ಲಿ ಜಮ್‌ಶೆಡ್‌ಪುರ ತಂಡದ ನೆರಿಜಸ್ ವಾಲ್ಸ್ಕಿಸ್ ಗೋಲು ಗಳಿಸಿದರು. ಮುಂಬೈ ಸಿಟಿ ತಂಡದ ಪರ ಬಾರ್ತಲೋಮೆವ್ ಒಗ್ಬೆಚೆ 15ನೇ ನಿಮಿಷದಲ್ಲಿ ಗೋಲು ಭಾರಿಸಿ ಸಮಬಲ ಸಾಧಿಸಿದ್ರು.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಜಮ್‌ಶೆಡ್‌ಪುರ ತಂಡಕ್ಕೆ ಮುಂಬೈ ಪ್ರಭಲ ಪೈಪೋಟಿ ನೀಡಿತು. ಆದರೆ ದ್ವಿತೀಯಾರ್ಧದಲ್ಲಿ ಮುಂಬೈ ತಂಡ ಸ್ಪಲ್ಪ ಕಳಪೆ ಪ್ರದರ್ಶನ ತೋರಿತು ಗೋಲು ಗಳಿಸಲು ಸಿಕ್ಕ ಹಲವು ಅವಕಾಶಗಳನ್ನು ಕೈ ಚೆಲ್ಲಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.