ಇಂಗ್ಲೆಂಡ್ : ಇಂಗ್ಲಿಷ್ ಪ್ರೀಮಿಯರ್ ಲೀಗ್ನ ಭಾನುವಾರದ ಪಂದ್ಯದಲ್ಲಿ ಚೆ ಆಡಮ್ಸ್ ಅದ್ಭುತವಾದ ಆಟ ಆಡುವ ಮೂಲಕ ಸೌತಂಪ್ಟನ್ ತಂಡವು 1-0 ಗೋಲುಗಳಿಂದ ಮ್ಯಾಂಚೆಸ್ಟರ್ ಸಿಟಿಯನ್ನು ಸೋಲಿಸಿತು.
ಪ್ರೀಮಿಯರ್ ಲೀಗ್ : ಮ್ಯಾಂಚೆಸ್ಟರ್ ಸಿಟಿಯನ್ನು 1-0 ಗೋಲುಗಳಿಂದ ಸೋಲಿಸಿದ ಸೌತಂಪ್ಟನ್ - ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಸೌತಂಪ್ಟನ್ಗೆ ಗೆಲುವು
ಇಂಗ್ಲಿಷ್ ಪ್ರೀಮಿಯರ್ ಲೀಗ್ನ ಭಾನುವಾರದ ಪಂದ್ಯದಲ್ಲಿ 1-0 ಗೋಲುಗಳಿಂದ ಮ್ಯಾಂಚೆಸ್ಟರ್ ಸಿಟಿಯನ್ನು ಸೋಲಿಸುವ ಮೂಲಕ ಸೌತಂಪ್ಟನ್ ಸ್ಕೋರ್ ಪಟ್ಟಿಯಲ್ಲಿ 13 ನೇ ಸ್ಥಾನಕ್ಕೇರಿದೆ.
ಸೀಸನ್ ಆರಂಭದಲ್ಲಿ ನಿರಾಶದಾಯಕ ಆಟ ಆಡಿದ ಆಡಮ್ಸ್, ಸಿಟಿ ಡಿಫೆಂಡರ್ ಒಲೆಕ್ಸಂಡರ್ ಜಿಂಚೆಂಕೊ ಹೊರ ಹೋದ ಬಳಿಕ ಉತ್ತಮ ಪ್ರದರ್ಶನ ತೋರಿದರು. ಆಡಮ್ಸ್ 16 ನಿಮಿಷದಲ್ಲಿ 40 ಮೀಟರ್ ವೃತ್ತದಲ್ಲಿ ಗೋಲ್ ಕೀಪರ್ ಎಡರ್ಸನ್ ಮೊರೇಸ್ ತಲೆ ಮೇಲೆ ಗೋಲು ಹೊಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಜೊತೆಗೆ ಸೌತಂಪ್ಟನ್ ಗೋಲ್ ಕೀಪರ್ ಅಲೆಕ್ಸ್ ಮೆಕಾರ್ಥಿಯ ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ಸಿಟಿಯನ್ನು ಮೂರನೇ ಬಾರಿ ಸೋಲುವಂತೆ ಮಾಡಿದರು. ಮ್ಯಾಂಚೆಸ್ಟರ್ ಸಿಟಿಯ ಕೋಚ್ ಪೆಪ್ ಗಾರ್ಡಿಯೊಲಾ ಅವರು ತಮ್ಮ ವೃತ್ತಿ ಜೀವನದಲ್ಲಿ ನಿರ್ವಹಿಸಿದ ತಂಡವೊಂದು ಸತತ ಸೋಲು ಕಂಡಿರುವುದು ಇದೇ ಮೊದಲ ಬಾರಿಯಾಗಿದೆ.