ಕರ್ನಾಟಕ

karnataka

ETV Bharat / sports

ಇಂಗ್ಲಿಷ್ ಪ್ರೀಮಿಯರ್ ಲೀಗ್: ಆಟಗಾರರು ಸೇರಿ 40 ಮಂದಿಗೆ ಕೊರೊನಾ ಸೋಂಕು ದೃಢ - ಇಂಗ್ಲೀಷ್ ಪ್ರೀಮಿಯರ್ ಲೀಗ್​ನಲ್ಲಿ ಕೊರೊನಾ ಸೋಂಕು

ಜನವರಿ 1 ಮತ್ತು ಜನವರಿ 3 ರ ಭಾನುವಾರದ ನಡುವೆ, 984 ಆಟಗಾರರು ಮತ್ತು ಕ್ಲಬ್ ಸಿಬ್ಬಂದಿ ಪರೀಕ್ಷಿಸಲಾಯಿತು ಮತ್ತು ಈ ಪೈಕಿ 12 ಮಂದಿ ಸೋಕಿಗೆ ತುತ್ತಾಗಿದ್ದಾರೆ ಎಂದು ಇಂಗ್ಲಿಷ್ ಪ್ರೀಮಿಯರ್ ಲೀಗ್ ತಿಳಿಸಿದೆ.

Premier League records 40 new COVID-19 cases
ಇಂಗ್ಲೀಷ್ ಪ್ರೀಮಿಯರ್ ಲೀಗ್

By

Published : Jan 6, 2021, 7:43 AM IST

ಲಂಡನ್: ಈ ಸೀಸನ್​ನಲ್ಲಿ ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ಅಂದರೆ 40 ಮಂದಿ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ ಎಂದು ಇಂಗ್ಲಿಷ್ ಪ್ರೀಮಿಯರ್ ಲೀಗ್ ತಿಳಿಸಿದೆ. ಕಳೆದ ವಾರವಷ್ಟೆ ಎರಡು ಸುತ್ತಿನ ಪರೀಕ್ಷೆ ನಡೆಸಲಾಗಿದೆ.

ಹೊಸ ಸೀಸನ್ ಪ್ರಾರಂಭವಾದಾಗಿನಿಂದ, ಇಪಿಎಲ್‌ನ ಮೊದಲ ವಿಭಾಗದಲ್ಲಿ ನಡೆಸಿದ 19 ಸುತ್ತುಗಳ ಪರೀಕ್ಷೆಯಲ್ಲಿ ಒಟ್ಟು 171 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದರು.

ಈಗ ವಾರಕ್ಕೆ ಎರಡು ಬಾರಿ ಪರೀಕ್ಷೆಗಳನ್ನು ನಡೆಸುತ್ತಿರುವ ಲೀಗ್, ಸೋಂಕಿಗೆ ತುತ್ತಾದ ಜನರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ, ಆದರೆ, ಅವರು 10 ದಿನಗಳವರೆಗೆ ಸ್ವಯಂ-ಕ್ವಾರಂಟೈನ್​ಗೆ ಒಳಗಾಗುತ್ತಾರೆ ಎಂದು ಹೇಳಿದೆ.

"ಡಿಸೆಂಬರ್ 28ರ ಸೋಮವಾರ ಮತ್ತು ಡಿಸೆಂಬರ್ 31ರ ಗುರುವಾರ, 1,311 ಆಟಗಾರರು ಮತ್ತು ಕ್ಲಬ್ ಸಿಬ್ಬಂದಿಯನ್ನು ಪರೀಕ್ಷಿಸಲಾಯಿತು. ಈ ಪೈಕಿ 28 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು" ಎಂದು ಹೇಳಿದೆ.

"ಜನವರಿ 1 ಮತ್ತು ಜನವರಿ 3 ರ ಭಾನುವಾರದ ನಡುವೆ, 984 ಆಟಗಾರರು ಮತ್ತು ಕ್ಲಬ್ ಸಿಬ್ಬಂದಿ ಪರೀಕ್ಷಿಸಲಾಯಿತು ಮತ್ತು ಈ ಪೈಕಿ 12 ಮಂದಿ ಸೋಕಿಗೆ ತುತ್ತಾಗಿದ್ದಾರೆ" ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ರೂಪಾಂತರ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ಹೊಸ ರಾಷ್ಟ್ರೀಯ ಕೋವಿಡ್-19 ಲಾಕ್‌ಡೌನ್ ಘೋಷಿಸಿದರು, ಆದರೆ, ಪ್ರೀಮಿಯರ್ ಲೀಗ್ ಮುಂದುವರಿಸಲು ಅನುಮತಿಸಲಾಗಿದೆ.

ABOUT THE AUTHOR

...view details