ಮ್ಯಾಂಚೆಸ್ಟರ್: ಗುರುವಾರ ಮ್ಯಾಂಚೆಸ್ಟರ್ನಲ್ಲಿ ನಡೆದ ಆರ್ಸೆನಲ್ ಕ್ಲಬ್ ವಿರುದ್ಧ 3-0 ಗೋಲುಗಳಿಂದ ಮ್ಯಾಂಚೆಸ್ಟರ್ ಸಿಟಿ ಗೆಲುವು ಸಾಧಿಸಿದೆ. ಈ ಮೂಲಕ ತಂದ 2019-20 ಆವೃತ್ತಿಯನ್ನು ಜಯದೊಂದಿಗೆ ಆರಂಭಿಸಿದೆ.
ಕೋವಿಡ್ 19 ಸಾಂಕ್ರಾಮಿಕದಿಂದ ಉಂಟಾದ ದೀರ್ಘ ವಿರಾಮದ ನಂತರ ನಡೆದ ಪ್ರೀಮಿಯರ್ ಲೀಗ್ ಬುಧವಾರ ಶೆಫೀಲ್ಡ್ ಯುನೈಟ್ ಮತ್ತು ಆಸ್ಟನ್ ವಿಲ್ಲ ತಂಡಗಳು ಕಾದಾಡುವ ಮೂಲಕ ಪ್ರೀಮಿಯರ್ ಲೀಗ್ ಪುನರಾರಂಭಗೊಂಡಿತು. ನಂತರ ಮ್ಯಾಂಚೆಸ್ಟರ್ ಸಿಟಿ ಹಾಗೂ ಆರ್ಸೆನಲ್ ನಡುವೆ ದ್ವಿತೀಯ ಪಂದ್ಯ ನಡೆಯಿತು.
ಪಂದ್ಯದ ಮೊದಲ ಗೋಲನ್ನು 45+2 ನೇ ನಿಮಿಷದಲ್ಲಿ ರಹೀಮ್ ಸ್ಟರ್ಲಿಂಗ್ ಹೊಡೆದರು. ನಂತರ ಕೆವಿನ್ ಡಿ ಬ್ರೂಯ್ನ್ ಪೆನಾಲ್ಟಿ ಮೂಲಕ ಎರಡನೇ ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಪಂದ್ಯ ಕೊನೆಗೊಳ್ಳುವ ಹಂತದಲ್ಲಿದ್ದ ವೇಳೆ 90+2 ನಿಮಿಷದಲ್ಲಿ ಫಿಲ್ ಫೋಡೆನ್ ಗೋಲು ಬಾರಿಸಿ ಮ್ಯಾಂಚೆಸ್ಟರ್ ಮುನ್ನಡೆಯನ್ನು 3 ಗೋಲುಗಳಿಗೆ ವಿಸ್ತರಿಸಿದರು.
ಇದಲ್ಲದೇ ಶೆಫೀಲ್ಡ್ ಯುನೈಟೆಡ್ ಮತ್ತು ಆಸ್ಟನ್ ವಿಲ್ಲಾ ನಡುವಿನ ಹಿಂದಿನ ಪಂದ್ಯದಂತೆಯೇ ಬ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಬೆಂಬಲ ನೀಡುವ ಸಲುವಾಗಿ ಮಂಡಿಯೂರಿ ಕುಳಿತುಕೊಂಡರು.
ಇದಕ್ಕೂ ಹಿಂದಿನ ಶೆಫೀಲ್ಡ್ ಯುನೈಟೆಡ್ ಮತ್ತು ಆಸ್ಟನ್ ವಿಲ್ಲಾ ನಡುವಿನ ಪಂದ್ಯ ಗೋಲು ರಹಿತ ಡ್ರಾನಲ್ಲಿ ಅಂತ್ಯಗೊಂಡಿತ್ತು.