ಕರ್ನಾಟಕ

karnataka

ETV Bharat / sports

100 ಗೋಲು ಸಿಡಿಸಿದ ರೊನಾಲ್ಡೋಗೆ ಫುಟ್​ಬಾಲ್​ ಲೆಜೆಂಡ್​ ಪೀಲೆ ಅಭಿನಂದನೆ - ಲಿಯೋನೆಲ್​ ಮೆಸ್ಸಿ‘

ನಾವು ಇಂದು 100ನೇ ಗೋಲನ್ನು ಸಂಭ್ರಮಿಸುತ್ತೇವೆಂದು ಭಾವಿಸಿದ್ದೆವು. ಆದರೆ, ಅದು 101 ಆಯಿತು!, ನಿಮ್ಮ ಈ ಜರ್ನಿಯಲ್ಲಿ ಹೊಸ ಎತ್ತರ ತಲುಪಿದ್ದಕ್ಕೆ ಅಭಿನಂದನೆಗಳು ಕ್ರಿಶ್ಚಿಯಾನೊ ರೊನಾಲ್ಡೊ..

ರೊನಾಲ್ಡೋಗೆ ಫುಟ್​ಬಾಲ್​ ಲೆಜೆಂಡ್​ ಪೀಲೆ ಅಭಿನಂದನೆ
ರೊನಾಲ್ಡೋಗೆ ಫುಟ್​ಬಾಲ್​ ಲೆಜೆಂಡ್​ ಪೀಲೆ ಅಭಿನಂದನೆ

By

Published : Sep 9, 2020, 6:46 PM IST

ನವದೆಹಲಿ :ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 100 ಗೋಲುಗಳ ಮೈಲುಗಲ್ಲನ್ನು ದಾಟಿದ ಪೋರ್ಚುಗಲ್​ ಸ್ಟಾರ್​ ಕ್ರಿಶ್ಚಿಯಾನೊ ರೊನಾಲ್ಡೊ ಅವರನ್ನು ಬ್ರೆಜಿಲ್​ ಶ್ರೇಷ್ಠ ಫುಟ್​ಬಾಲ್​ ಲೆಜೆಂಡ್​ ಪೀಲೆ ಅಭಿನಂದಿಸಿದ್ದಾರೆ.

ರೊನಾಲ್ಡೊ ನ್ಯಾಷನಲ್​ ಕಪ್‌​ನಲ್ಲಿ ಸ್ವೀಡನ್​ ವಿರುದ್ಧ 2 ಗೂಲುಗಳಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 100 ಗೋಲು ಗಳಿಸಿದ ಸಾಧನೆ ಮಾಡಿದ್ದರು. ಈ ಸಾಧನೆ ಮಾಡಿದ ವಿಶ್ವದ 2ನೇ ಫುಟ್​ಬಾಲ್‌ ಆಟಗಾರ ಎನಿಸಿಕೊಂಡಿದ್ದರು.

ರೊನೊಲ್ಡೊ ದಾಖಲೆ

ನಾವು ಇಂದು 100ನೇ ಗೋಲನ್ನು ಸಂಭ್ರಮಿಸುತ್ತೇವೆಂದು ಭಾವಿಸಿದ್ದೆವು. ಆದರೆ, ಅದು 101 ಆಯಿತು!, ನಿಮ್ಮ ಈ ಜರ್ನಿಯಲ್ಲಿ ಹೊಸ ಎತ್ತರ ತಲುಪಿದ್ದಕ್ಕೆ ಅಭಿನಂದನೆಗಳು ಕ್ರಿಶ್ಚಿಯಾನೊ ರೊನಾಲ್ಡೊ ಎಂದು ಪೀಲೆ ಟ್ವೀಟ್ ಮಾಡಿದ್ದಾರೆ.

35 ವರ್ಷದ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಅತಿ ಹೆಚ್ಚು ಗೋಲುಗಳಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಇರಾನ್​ ಸ್ಟೈಕರ್​ ಅಲಿ ಡೇಯಿ 109 ಗೋಲು ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಸಮಕಾಲೀನ ಲಿಯೋನೆಲ್ ಮೆಸ್ಸಿ 70 ಗೋಲು ಗಳಿಸಿದ್ದಾರೆ. ಭಾರತದ ಸುನಿಲ್​ ಚೆಟ್ರಿ ಕೂಡ 72 ಗೋಲುಗಳಿಸಿದ್ದಾರೆ.

ABOUT THE AUTHOR

...view details