ಪ್ಯಾರೀಸ್: ಬ್ರೆಜಿಲ್ ಹಾಗೂ ಪ್ರಾನ್ಸ್ನ ಪಿಎಸ್ಜಿ ಕ್ಲಬ್ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ಹಾಗೂ ಅದೇ ಕ್ಲಬ್ನ ಏಂಜೆಲ್ ಡಿ ಮರಿಯಾಗೆ ಕೋವಿಡ್ 19 ಸೋಂಕು ತಗುಲಿದೆ ಎಂದು ಕ್ಲಬ್ ಟ್ವಿಟರ್ ಮೂಲಕ ಖಚಿತಪಡಿಸಿದೆ.
ಫ್ರೆಂಚ್ ಕ್ಲಬ್ ಕೊರೊನಾವೈರಸ್ ಸುರಕ್ಷತಾ ಪ್ರೋಟೋಕಾಲ್ ಅನ್ನು ಆಟಗಾರರು ಅನುಸರಿಸಲು ಘೋಷಣೆ ಮಾಡಿದೆ ಮತ್ತು ಹೆಚ್ಚಿನ ಸೋಂಕುಗಳನ್ನು ತಪ್ಪಿಸಲು ಪಾಸಿಟಿವ್ ಬಂದಿರುವ ಆಟಗಾರರನ್ನು ಕ್ವಾರಂಟೈನಲ್ಲಿರಿಸಿದೆ.
ಇತ್ತೀಚೆಗೆ ಚಾಂಪಿಯನ್ಸ್ ಲೀಗ್ ಫೈನಲ್ ಪ್ರವೇಶಿಸಿದ್ದ ಪಿಎಸ್ಜಿ 1-0ಯಲ್ಲಿ ಬೇಯರ್ನ್ ಮ್ಯೂನಿಚ್ ವಿರುದ್ಧ ಸೋಲನುಭವಿಸಿತ್ತು. 26 ವರ್ಷಗಳ ನಂತರ ಫೈನಲ್ ಪ್ರವೇಶದ ಸಾಧನೆ ಮಾಡಿದ್ದ ಪ್ರೆಂಷ್ ಕ್ಲಬ್ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿತ್ತು.
ತಮ್ಮ ತಂಡದ ಆಟಗಾರರಿಗೆ ಕೋವಿಡ್ 19 ಪಾಸಿಟಿವ್ ಬಂದಿರುವುದರಿಂದ ಪ್ರೆಂಚ್ ಲೀಗ್ನಲ್ಲಿ ತಮ್ಮ ಪಂದ್ಯಗಳನ್ನು ಮುಂದೂಡುವಂತೆ ಸಂಘಟಕರಿಗೆ ಮನವಿ ಮಾಡಿಕೊಂಡಿದೆ. ಚಾಂಪಿಯನ್ಸ್ ಲೀಗ್ನಲ್ಲಿ 10 ದಿನಗಳ ಅವಧಿಯಲ್ಲಿ 3 ಪಂದ್ಯಗಳನ್ನು ಆಡಿದ್ದು ಆಟಗಾರರಿಗೆ ವಿಶ್ರಾಂತಿ ನೀಡಿತ್ತು. ನೇಮರ್ ಸೇರಿದಂತೆ ಕೆಲವು ಆಟಗಾರರು ಹೆಚ್ಚುವರಿ ರಜೆ ಪಡೆದಿದ್ದರು. ಈ ವೇಳೆ ಸೋಂಕಿಗೆ ಒಳಗಾಗಿರಬೇಕು ಎಂದು ಕ್ಲಬ್ ತಿಳಿಸಿದೆ.
ಪಾಸಿಟಿವ್ ಬಂದಿರುವ ಆಟಗಾರರು ಪ್ರೋಟೋಕಾಲ್ನ ನಿಯಮಗಳನ್ನು ಅನುಸರಿಸಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಮುಂದಿನ ಒಂದರೆಡು ದಿನಗಳಲ್ಲಿ ಆಟಗಾರರು ಮತ್ತು ಸಿಬ್ಬಂದಿಗಳು ಮತ್ತೆ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಕ್ಲಬ್ ತನ್ನ ಸಾಮಾಜಿಕ ಜಾಲಾತಾಣದಲ್ಲಿ ತಿಳಿಸಿದೆ.