ದೋಹಾ[ಕತಾರ್] :ಫುಟ್ಬಾಲ್ ಆಟಗಾರ ಥಾಮಸ್ ಮುಲ್ಲರ್ಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಬೇಯರ್ನ್ ಮ್ಯೂನಿಚ್ ಪ್ರಕಟಿಸಿದ್ದಾರೆ.
ಫುಟ್ಬಾಲ್ ಆಟಗಾರ ಮುಲ್ಲರ್ಗೆ ಕೊರೊನಾ ದೃಢ - ಫಿಫಾ ಕ್ಲಬ್ ವಿಶ್ವಕಪ್ ಫೈನಲ್ ಪಂದ್ಯ
ವಿಷಯ ತಿಳಿದ ಕೂಡಲೇ ಮುಲ್ಲರ್ ತಂಡದಿಂದ ಪ್ರತ್ಯೇಕವಾಗಿದ್ದು, ಮ್ಯೂನಿಚ್‌ಗೆ ಹಿಂದಿರುಗಿದ ನಂತರ ಕ್ವಾರಂಟೈನ್ಗೆ ಒಳಪಡಲಿದ್ದಾರೆ ಎಂದು ಕ್ಲಬ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..
Thomas Muller
ಥಾಮಸ್ ಮುಲ್ಲರ್ ಅವರು ದೋಹಾದಲ್ಲಿ ನಡೆದ ಫಿಫಾ ಕ್ಲಬ್ ವಿಶ್ವಕಪ್ ವೇಳೆ ಕೊರೊನಾ ಪರೀಕ್ಷೆ ನಡೆಸಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ವಿಷಯ ತಿಳಿದ ಕೂಡಲೇ ಮುಲ್ಲರ್ ತಂಡದಿಂದ ಪ್ರತ್ಯೇಕವಾಗಿದ್ದು, ಮ್ಯೂನಿಚ್‌ಗೆ ಹಿಂದಿರುಗಿದ ನಂತರ ಕ್ವಾರಂಟೈನ್ಗೆ ಒಳಪಡಲಿದ್ದಾರೆ ಎಂದು ಕ್ಲಬ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲ್ಲರ್ಗೆ ಕೊರೊನಾ ದೃಢಪಟ್ಟ ಹಿನ್ನೆಲೆ ತಂಡದ ಎಲ್ಲಾ ಆಟಗಾರರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ಪ್ರಕರಣ ಪತ್ತೆಯಾಗಿಲ್ಲ.