ಕೈರೋ:ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೊಹಮ್ಮದ್ ಸಲಾ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿರುವುದಾಗಿ ಈಜಿಪ್ಟ್ ಫುಟ್ಬಾಲ್ ಅಸೋಸಿಯೇಷನ್ (ಇಎಫ್ಎ) ಶುಕ್ರವಾರ ತಿಳಿಸಿದೆ.
ವೈದ್ಯಕೀಯ ಸ್ವ್ಯಾಬ್ ನಡೆಸಿದ ವೇಳೆ ನಮ್ಮ ರಾಷ್ಟ್ರೀಯ ಫುಟ್ಬಾಲ್ ತಂಡದ ಅಂತಾರಾಷ್ಟ್ರೀಯ ಆಟಗಾರ, ಲಿವರ್‌ಪೂಲ್ ತಾರೆ ಮೊಹಮ್ಮದ್ ಸಲಾಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅವರ ಕೋವಿಡ್-19 ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ಫುಟ್ಬಾಲ್ ಫೆಡರೇಶನ್ ತಿಳಿಸಿದೆ.