ನವದೆಹಲಿ:ಇತ್ತೀಚೆಗೆ ಕೋಪಾ ಅಮೆರಿಕ ಕಪ್ ಗೆಲ್ಲುವ ಮೂಲಕ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲ ಪ್ರಮುಖ ಟ್ರೋಫಿ ಗೆದ್ದ ಶ್ರೇಯಕ್ಕೆ ಪಾತ್ರರಾಗಿದ್ದ ಅರ್ಜೆಂಟೀನಾ ತಂಡದ ನಾಯಕ ಲಿಯೋನಲ್ ಮೆಸ್ಸಿ ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.
ಲಿಯೋನಲ್ ಮೆಸ್ಸಿ ಕೋಪಾ ಅಮೆರಿಕ ಟ್ರೋಫಿಯೊಂದಿಗೆ ಕುಳಿತು ಪೋಸ್ ಕೊಟ್ಟಿರುವ ಫೋಟೋ ಬರೋಬ್ಬರಿ 2 ಕೋಟಿ ಲೈಕ್ ಗಿಟ್ಟಿಸಿಕೊಂಡಿದೆ. ಇದು ಕ್ರೀಡಾಪಟುವೊಬ್ಬನ ಪೋಸ್ಟ್ ಸಾಮಾಜಿಕ ಜಾಲಾತಾಣದಲ್ಲಿ ಪಡೆದ ಗರಿಷ್ಠ ಲೈಕ್ ಎಂಬ ಹೆಗ್ಗಳಿಕೆ ಪಡೆದಿದೆ.
ಈ ಹಿಂದೆ ಪೋರ್ಚುಗಲ್ ತಂಡದ ನಾಯಕ ಕ್ರಿಶ್ಚಿಯನ್ ರೊನಾಲ್ಡೊ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಅವರಿಗೆ ಸಂತಾಪ ಸೂಚಿಸಿ ಮಾಡಿದ್ದ ಪೋಸ್ಟ್ 19.8 ಮಿಲಿಯನ್(1.98 ಕೋಟಿ) ಲೈಕ್ ಪಡೆದಿದ್ದ ಪೋಸ್ಟ್ ಇಲ್ಲಿಯವರೆಗಿನ ಗರಿಷ್ಠ ಲೈಕ್ ಪಡೆದ ಪೋಸ್ಟ್ ಆಗಿತ್ತು.