ಬಾರ್ಸಿಲೋನಾ :ಅರ್ಜೆಂಟೀನಾ ತಂಡ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿ ಮುಂದಿನ 5 ವರ್ಷಗಳ ಸ್ಪೇನಿನ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾದ ಜೊತೆಗೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ ಲಿಯೋನಲ್ ಮೆಸ್ಸಿ ಕ್ಲಬ್ನೊಂದಿಗೆ 5 ವರ್ಷಗಳ ಹೊಸ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹಿಂದಿನ ಒಪ್ಪಂದದಲ್ಲಿ ಪಡೆಯುತ್ತಿದ್ದ ವೇತನದಲ್ಲಿ ಶೇ.50ರಷ್ಟು ಕಡಿತಕ್ಕೆ ಒಪ್ಪಿಗೆ ಸೂಚಿಸಿ 5 ವರ್ಷಗಳ ಹೊಸ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಕ್ಲಬ್ ತುಂಬಾ ನಷ್ಟದಲ್ಲಿದ್ದು, ಸಾಲದಲ್ಲಿ ಮುಳುಗಿದೆ. ಕ್ಲಬ್ನ ದುಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಮೆಸ್ಸಿ ತಮ್ಮ ವೇತನ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಡಿಯಾರಿಯೋ ಸ್ಪೋರ್ಟ್ಸ್ ತನ್ನ ಟ್ವಿಟರ್ನಲ್ಲಿ ಪ್ರಕಟಿಸಿದೆ.
ಜೂನ್ 30ಕ್ಕೆ ಲಿಯೋನಲ್ ಮೆಸ್ಸಿ ಒಪ್ಪಂದ ಮುಕ್ತರಾಗಿದ್ದು, ಫ್ರೀ ಏಜೆಂಟ್ ಆಗಿದ್ದಾರೆ. ಅವರು ಯಾವ ತಂಡಕ್ಕಾದರೂ ಸಹಿ ಮಾಡುವ ಅವಕಾಶವಿದೆ. ಈಗಾಗಲೇ, ಮ್ಯಾಂಚೆಸ್ಟರ್ ಸಿಟಿ, ಪ್ಯಾರಿಸ್ ಸೇಂಟ್ ಜರ್ಮೈನ್, ಇಂಟರ್ ಮಲನ್ ಸೇರಿದಂತೆ ಹಲವಾರು ಕ್ಲಬ್ಗಳು ಮೆಸ್ಸಿಯನ್ನು ತಂಡಕ್ಕೆ ಸೇರಿಸಕೊಳ್ಳಲು ಮುಂದಾಗಿವೆ ಎಂಬ ಊಹಾಪೋಹಗಳು ಸಹಾ ಕೇಳಿ ಬಂದಿದ್ದವು.
ಆದರೆ, 2004ರಿಂದ ಬಾರ್ಸಿಲೋನಾದಲ್ಲೇ ತಮ್ಮ ವೃತ್ತಿ ಜೀವನ ಕಳೆದಿರುವ ಅರ್ಜೆಂಟೀನಾ ನಾಯಕ ಕ್ಯಾಟಲನ್ ಪರ ಮತ್ತೆ 5 ವರ್ಷಗಳ ಕಾಲ ಇರಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಈ ಒಪ್ಪಂದದ ಪ್ರಕಾರ ಮೆಸ್ಸಿ 2016ರವರೆಗೆ ಬಾರ್ಸಿಲೋನಾ ತಂಡದಲ್ಲಿರಲಿದ್ದಾರೆ.
ಇದನ್ನೂ ಓದಿ:ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಕಪ್ ಗೆದ್ದ ಮೆಸ್ಸಿ ಪಡೆ