ಕರ್ನಾಟಕ

karnataka

ETV Bharat / sports

ಹ್ಯಾಟ್ರಿಕ್ ಗೋಲು ದಾಖಲಿಸಿ ಬ್ರೆಜಿಲ್​​ನ​​ ಪೀಲೆಯನ್ನ ಹಿಂದಿಕ್ಕಿದ ಮೆಸ್ಸಿ

64ನೇ ನಿಮಿಷದಲ್ಲಿ ಹಾಗೂ 88ನೇ ನಿಮಿಷದಲ್ಲಿ 3ನೇ ಗೋಲು ದಾಖಲಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ತಂಡವು 3-0 ಗೋಲುಗಳ ಅಂತರದಿಂದ ಜಯ ದಾಖಲಿಸುವಲ್ಲಿಯೂ ನೆರವಾದರು..

messi
ಸ್ಟಾರ್ ಆಟಗಾರ ಮೆಸ್ಸಿ

By

Published : Sep 10, 2021, 4:15 PM IST

ಬ್ಯೂನಸ್ ಐರಿಸ್ (ಅರ್ಜೆಂಟೀನಾ):ಅರ್ಜೆಂಟೀನಾ ಹಾಗೂ ಬೋಲಿವಿಯಾ ನಡುವಿನ ಫುಟ್​ಬಾಲ್​ ಪಂದ್ಯದಲ್ಲಿ ಮೂರು ಗೋಲು ಬಾರಿಸುವ ಮೂಲಕ ಅರ್ಜೇಟೀನಾ ಸ್ಟಾರ್ ಆಟಗಾರ ಲಿಯೋನಲ್ ಮೆಸ್ಸಿ ಬ್ರೆಜಿಲ್​​ನ ಪೀಲೆ ಅವರ ಗೋಲುಗಳ ಸಂಖ್ಯೆಯಲ್ಲಿ ಮೀರಿಸಿದ್ದಾರೆ.

ಅಲ್ಲದೆ ದಕ್ಷಿಣ ಅಮೆರಿಕ ಇತಿಹಾಸದಲ್ಲಿಯೇ ಹೆಚ್ಚು ಅಂತಾರಾಷ್ಟ್ರೀಯ ಗೋಲು ಬಾರಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 34 ವರ್ಷದ ಮೆಸ್ಸಿ ಅರ್ಜೆಂಟೀನಾ ಪರವಾಗಿ ಮೂರು ಗೋಲು ಬಾರಿಸಿದರು.

ಈ ಮೂಲಕ ರಾಷ್ಟ್ರೀಯ ತಂಡದ ಪರವಾಗಿ 79 ಗೋಲು ಬಾರಿಸಿದಂತಾಗಿದೆ. ಆದರೆ, ಬ್ರೆಜಿಲ್​ನ ಪೀಲೆ ಒಟ್ಟು 92 ಪಂದ್ಯದಲ್ಲಿ 77 ಗೋಲು ಬಾರಿಸಿದ್ದಾರೆ. ಬೋಲಿವಿಯಾ ವಿರುದ್ಧದ ಪಂದ್ಯದ ವೇಳೆ ಮೊದಲಾರ್ಧದ 14ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು.

ಬಳಿಕ 64ನೇ ನಿಮಿಷದಲ್ಲಿ ಹಾಗೂ 88ನೇ ನಿಮಿಷದಲ್ಲಿ 3ನೇ ಗೋಲು ದಾಖಲಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ತಂಡವು 3-0 ಗೋಲುಗಳ ಅಂತರದಿಂದ ಜಯ ದಾಖಲಿಸುವಲ್ಲಿಯೂ ನೆರವಾದರು.

ಓದಿ:US Open ಡಬಲ್ಸ್​: ಮೊದಲ ಸುತ್ತಿನಲ್ಲೇ ಹೊರಬಿದ್ದ ಅಂಕಿತಾ, ದಿವಿಜ್ ಶರಣ್

ABOUT THE AUTHOR

...view details